ಮಡಿಕೇರಿ, ಏ. ೧೯: ಅಂತರರಾಷ್ಟಿçÃಯ ಹಾಕಿ ತೀರ್ಪುಗಾರ್ತಿಯಾಗಿದ್ದ ಮುಂಡAಡ ಅನುಪಮಾ ಅವರ ಅಕಾಲಿಕ ನಿಧನಕ್ಕೆ ಭಾರತ ಹಾಕಿ ತಂಡದ ಮಾಜಿ ಒಲಂಪಿಯನ್ ಬಿ.ಪಿ. ಗೋವಿಂದ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತ ಹಾಕಿ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಬಿ.ಪಿ. ಗೋವಿಂದ ಅವರು ಅನುಪಮಾ ಅವರ ವೃತ್ತಿ ಜೀವನವನ್ನು ಸ್ಮರಿಸಿದ್ದು, ಅವರು ತೀರ್ಪುಗಾರಿಕೆಯಲ್ಲಿ ಉತ್ತಮ ರೀತಿಯಲ್ಲಿ ಕರ್ವವ್ಯ ನಿರ್ವಹಿಸುತ್ತಿದ್ದರು. ತಾವು ಖುದ್ದಾಗಿ ಇವರ ಕಾರ್ಯವೈಖರಿಯನ್ನು ಗಮನಿಸಿದ್ದು, ಇವರ ನಿಧನ ಹಾಕಿ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ‘ಶಕ್ತಿ’ಯೊಂದಿಗೆ ಚೆನ್ನೆöÊಯಿಂದ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ್ದಾರೆ.