ಶನಿವಾರಸಂತೆ, ಏ. ೧೯: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚಿಕ್ಕಕುಂದ ಗ್ರಾಮದ ಚಾಲಕ ನವೀನ್ ಅವರು ಚಿಕ್ಕಬಂಡಾರ ಗ್ರಾಮದ ರಘು ಅವರಿಗೆ ನೀಡಿದ ಟೈಯರ್‌ನ್ನು ಕೇಳಲು ಹೋದಾಗ ಆರೋಪಿ ಲೋಕೇಶ್ ಹಾಗೂ ರಘು ಅವರುಗಳು ನವೀನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನವೀನ್ ಅವರು ಶನಿವಾರಸಂತೆ ಪೊಲೀಸರಿಗೆ ನೀಡಿದ ದೂರಿನ ಮೇರೆ, ಪೊಲೀಸರು ಆರೋಪಿಗಳಿಬ್ಬರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.