ಮಡಿಕೇರಿ, ಏ. ೧೯: ಕೋವಿಡ್-೧೯ ಸೋಂಕಿನ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆಗೆ ಸಂಬAಧಿಸಿದAತೆ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಳ್ಳುವ ಕುರಿತು ಕೆಲವು ನಿರ್ದೇಶನಗಳನ್ನು ಚುನಾವಣಾ ಆಯೋಗ ನೀಡಿ ಪಾಲನೆಗೆ ಆದೇಶಿಸಿದೆ.

ಅಭ್ಯರ್ಥಿ ಸೇರಿ ಗರಿಷ್ಟ ೫ ಬೆಂಬಲಿಗರೊAದಿಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಮನೆ ಪ್ರಚಾರ ನಡೆಸಬೇಕು. ಪ್ರಚಾರಕ್ಕೆ ಯಾವುದೇ ವಾಹನ ಬಳಸಬಾರದು ಹಾಗೂ ಗುಂಪು ಗುಂಪಾಗಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಇಲೆಕ್ಟಾçನಿಕ್ ಮೀಡಿಯಾದಲ್ಲಿ ಪ್ರಚಾರ ಕೈಗೊಳ್ಳಬಹುದು. ಅಭ್ಯರ್ಥಿಗಳ ಪ್ರಚಾರವಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಈ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್, ಕೈಗವಸು ಧರಿಸಿರಬೇಕು ಎಂದು ಚುನಾವಣಾ ಆಯೋಗ ಅಧೀನ ಕಾರ್ಯದರ್ಶಿ ಆದೇಶಿಸಿದ್ದು, ಸೂಚನೆ ಹೊರತುಪಡಿಸಿ ಯಾವುದೇ ರೀತಿಯ ಪ್ರಚಾರ ಮಾಡಬಾರದು ಎಂದು ನಿರ್ದೇಶಿಸಿದೆ.