ಮಡಿಕೇರಿ, ಏ. ೧೯: ಕೂರ್ಗ್ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪದಲ್ಲಿ ಪದವಿ ಪ್ರದಾನ ಸಮಾರಂಭವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ ಮುಖ್ಯ ಅತಿಥಿಗಳಾದ ಕರ್ನಲ್ ಚೇತನ್ ದಿಮಾನ್ ಮಾತನಾಡಿ ಪ್ರಯತ್ನಗಳ ಫಲದಿಂದ ಸಫಲತೆಯೂ ಮತ್ತು ಪ್ರಯತ್ನವೇ ಇಲ್ಲದಿದ್ದರೆ ವಿಫಲತೆಯೂ ಸಂಭವಿಸುತ್ತದೆ. ಸತತ ಪ್ರಯತ್ನ ಕಾರ್ಯಾನುಭವ, ಬದ್ಧತೆ ತ್ಯಾಗ ಗಳಿಂದ ಮಹತ್ತರ ಬದಲಾವಣೆ ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಶಾಲಾ ಪ್ರಾಂಶುಪಾಲರಾದ ಡಾ. ಬೆನ್ನಿ ಕುರಿಯಾಕೋಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿ ದ್ದರು.