ಸುಂಟಿಕೊಪ್ಪ, ಏ. ೧೯: ಇಲ್ಲಿನ ನಾರ್ಗಾಣೆ ಗ್ರಾಮದ ಶ್ರೀದೇವಿಯಲ್ಲಿ ರುವ ಅಣ್ಣಪ್ಪ ಸ್ವಾಮಿ ದೇವಾಲಯ ದಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಧರ್ಮ ದೈವದ ನೇಮೋತ್ಸವವು ವಿಜೃಂಭಣೆ ಯಿಂದ ಸಂಪನ್ನ ಗೊಂಡಿತು.
ಬುಧವಾರ ರಾತ್ರಿ ೮ ಗಂಟೆಗೆ ಭಂಡಾರ ಮೆರವಣಿಗೆ ನಂತರ ೮.೩೦ಕ್ಕೆ ಎಣ್ಣೆ ಅರ್ಪಣೆ, ೧೦ ಗಂಟೆಯ ನಂತರ ಕಲ್ಲುರ್ಟಿ ದೈವದ ನೇಮ ನಡೆದು ಗಂಧ ಪ್ರಸಾದ ವಿತರಿಸಲಾಯಿತು. ರಾತ್ರಿ ೧ ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ ಸ್ವಾಮಿ ಹಾಗೂ ಪಂಜುರ್ಲಿ ದೈವದ ನೇಮದ ನಂತರ ರಾತ್ರಿ ೩ ಗಂಟೆಗೆ ಗುಳಿಗ ಹಾಗೂ ಚಾಮುಂಡೇಶ್ವರಿ ಧರ್ಮ ದೈವದ ಜೋಡಿ ಕೋಲವು ೯ ಗಂಟೆಯವರೆಗೆ ನಡೆಯಿತು. ಸುಂಟಿಕೊಪ್ಪ ಸೇರಿದಂತೆ ವೀರಾಜಪೇಟೆ, ಸಿದ್ದಾಪುರ, ಚೆಟ್ಟಳ್ಳಿ, ಮಾದಾಪುರ, ಸೋಮವಾರಪೇಟೆ ಕಡೆಯಿಂದ ಆಗಮಿಸಿದ ಭಕ್ತಾದಿಗಳು ಧರ್ಮ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಎರಡು ಗಂಟೆಯಿAದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಈ ಸಂದರ್ಭ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಮುಖ್ಯಸ್ಥ ಬಿ.ಡಿ. ರಾಜು ರೈ ಕುಟುಂಬಸ್ಥರು ಇದ್ದರು.