ಸೋಮವಾರಪೇಟೆ, ಏ. ೧೯: ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಒಡೆಯನಪುರ, ಗೋಪಾಲಪುರ, ಮಾದೇಗೋಡು, ವಳಗುಂದ ಗಿರಿಜನರ ಹಾಡಿ ಹಾಗೂ ಗೌಡಳ್ಳಿಯಲ್ಲಿ ಕೋವಿಡ್-೧೯ ಲಸಿಕೆ ಅಭಿಯಾನ ನಡೆಯಿತು.

ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ೧೬೯೫ ಮಂದಿಗೆ ಲಸಿಕೆ ಹಾಕುವ ಗುರಿಯಿದ್ದು, ಈಗಾಗಲೇ ೧೧೦೦ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಇಂದೂಧರ್ ತಿಳಿಸಿದರು.

ವಳಗುಂದ ಗ್ರಾಮದಲ್ಲಿ ಆಯೋಜಿಸಿದ್ದ ಲಸಿಕಾ ಶಿಬಿರದಲ್ಲಿ ಒಂದೇ ದಿನ ೫೬ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳಿAದ ವಳಗುಂದ ಗಿರಿಜನರ ಹಾಡಿಯಲ್ಲಿ ೪೫ ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.