ಮಡಿಕೇರಿ, ಏ. ೧೯: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ೮ನೇ ತರಗತಿಯಿಂದ ಮೇಲ್ಪಟ್ಟ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದೆಂದು ಸಮಿತಿಯ ತಾಲೂಕು ಅಧ್ಯಕ್ಷ ಎ.ಪಿ. ದೀಪಕ್ ತಿಳಿಸಿದ್ದಾರೆ.

“ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ” ವಿಷಯದ ಕುರಿತು ಒಂದು ಸಾವಿರ ಪದಗಳು ಮೀರದಂತೆ ಟೈಪ್ ಮಾಡಿದ ಪ್ರಬಂಧವನ್ನು ೯೬೧೧೭೬೬೭೧೩ ಸಂಖ್ಯೆಗೆ ವಾಟ್ಸಪ್ ಮತ್ತು ಜeeಠಿಚಿಞಜeeಠಿuಚಿಠಿ@gmಚಿiಟ.ಛಿom ಗೆ ಇ-ಮೇಲ್ ಮಾಡಬಹುದಾಗಿದೆ.

ಪ್ರಬಂಧ ಕಳುಹಿಸಲು ತಾ. ೩೦ ಕೊನೆಯ ದಿನವಾಗಿದ್ದು, ಮೇ ಎರಡನೇ ವಾರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಸ್ಪರ್ಧಿಗಳು ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು.

ಪ್ರಥಮ ಬಹುಮಾನ ರೂ. ೫ ಸಾವಿರ, ದ್ವಿತೀಯ ರೂ. ೩ ಸಾವಿರ ಹಾಗೂ ತೃತೀಯ ಬಹುಮಾನ ರೂ. ೧ ಸಾವಿರ ಆಗಿರುತ್ತದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವ ಪ್ರಬಂಧಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ದೀಪಕ್ ತಿಳಿಸಿದ್ದಾರೆ.