ಕೂಡಿಗೆ, ಏ. ೧೯: ಶಾಸಕ ಅಪ್ಪಚ್ಚು ರಂಜನ್ ಅವರ ಸೂಚನೆಯಂತೆ ಕಕ್ಕೆಹೊಳೆ ನಾಲೆಯ ದುರಸ್ತಿ ಕಾರ್ಯ ಆರಂಭಗೊAಡಿದೆ. ಬ್ರಿಟಿಷ್ ಕಾಲದಲ್ಲಿ ನಿರ್ಮಾಣ ಗೊಂಡಿರುವ ಕಕ್ಕೆ ಹೊಳೆ ಅಣೆಕಟ್ಟೆಯು ಎಲಕನೂರು ಹೊಸಹಳ್ಳಿ ಸಮೀಪದ ಕಾಡಿನ ಮದ್ಯ ಭಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದಿನಿAದ ಇಂದಿನವರೆಗೂ ಈ ಭಾಗ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುತ್ತಾ ಭತ್ತದ ಬೇಸಾಯ ಮಾಡಲು ಅನುಕೂಲ ವಾಗಿತ್ತು. ಅದರೆ ಕಕ್ಕೆ ಹೊಳೆಯಿಂದ ಮುಖ್ಯ ನಾಲೆಯ ಉಪ ನಾಲೆಯು ಕಳೆದ ೨೫ ವರ್ಷಗಳಿಂದ ಹೂಳು ತುಂಬಿ ಮುಚ್ಚಿಕೊಂಡಿತ್ತು. ಕಳೆದ ಸಾಲಿನಲ್ಲಿ ಈ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಬೆಟ್ಟದ ಕಡೆಗಳಿಂದ ಬರುವ ನೀರು ಸಹ ಹೋಗಲು ಕಾಲುವೆ ಇಲ್ಲದೆ ಕೆಳಭಾಗದ ರೈತರ ಬೆಳೆದ ಬೆಳೆಗಳು ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದವು. ಮಳೆಯಿಂದಾಗಿ ಪರಿಹಾರ ನೀಡುವ ವೀಕ್ಷಣೆ ಸಂದರ್ಭದಲ್ಲಿ ಶಾಸಕರು ಸ್ಥಳ ಪರಿಶೀಲನೆ ನಡೆಸಿದಾಗ. ಕಾಲುವೆಯ ಹೂಳು ತುಂಬುವುದು ಗಮನಕ್ಕೆ ಬಂದ ತಕ್ಷಣವೇ ಕಾಮಗಾರಿಯನ್ನು ಪ್ರಾರಂಭ ಮಾಡುವಂತೆ ಸಣ್ಣ ನೀರಾವರಿ ಅಧಿಕಾರಿಗೆ ಸೂಚನೆ ನೀಡಿದರು ಅದರಂತೆ ಇದೀಗ ಕಕ್ಕೆ ಹೊಳೆ ಅಣೆಕಟ್ಟೆಯಿಂದ ಹತ್ತು ಕಿಲೋಮೀಟರ್ ದೂರದವರೆಗೆ ಮುಖ್ಯ ನಾಲೆಯ ಹೂಳು ತೆಗೆಯುವಿಕೆ ಮತ್ತು ರಸ್ತೆಯ ಅಗಲಿಕರಣದ ಕಾಮಗಾರಿಯು ಬರದಿಂದ ಸಾಗಿ ಪೂರ್ಣ ಗೊಳ್ಳವ ಹಂತವನ್ನು ತಲುಪಿದೆ.

ಈ ಕಾಮಗಾರಿಯು ಅಣೆಕಟ್ಟೆ ಯಿಂದ ಸೀಗೆಹೊಸೂರು ಗ್ರಾಮದ ಮೂಲಕ ಭುವನಗಿರಿ ಮಾರ್ಗವಾಗಿ ಕಣಿವೆ ಸಮೀಪದ ಕಲ್ಲುಕರೆಯವರೆಗೆ ನಡೆಯುತ್ತಿದೆ. ರೈತರ ಮನವಿಗೆ ಸ್ಪಂದಿಸಿದ ಶಾಸಕರು ಅಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಕಾಮಗಾರಿಯನ್ನು ಕೈಗೊಳ್ಳುವಂತೆ ಅದೇಶ ನೀಡಿದ್ದರು. ಅದರಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಫಿಕ್ ಕ್ರಿಯಾ ಯೋಜನೆಯನ್ನು ತಯಾರಿಸಿ ದ್ದರು. ಹತ್ತು ಲಕ್ಷಕ್ಕೂ ಹೆಚ್ಚಿನ ಪ್ರಮಾಣ ದಲ್ಲಿ ಹಣವನ್ನು ಕಾಮ ಗಾರಿಗೆ ವಿನಿಯೋಗಿಸಿ ನೂರಾರು ರೈತರ ಜಮೀನಿನ ಬೇಸಾಯಕ್ಕೆ ಅನುಕೂಲ ವಾಗುವಂತೆ ಮಾಡಲು ನೂತನ ಮಾದರಿಯ ಕಾಂಕ್ರೀಟ್ ಚರಂಡಿ ಮತ್ತು ಪಂಪ್ ಅಳವಡಿಸುವಿಕೆ ಕಾಮಗಾರಿ ನಡೆಸಲಾಗುತ್ತಿದೆ.

ಈ ಯೋಜನೆಯಿಂದಾಗಿ ಈ ಭಾಗದ ಹತ್ತು ಗ್ರಾಮಗಳಿಗೆ ಕಕ್ಕೆ ಹೊಳೆಯ ನೀರನ್ನು ಬಳಕೆ ಮಾಡಿಕೊಂಡು ಬೇಸಾಯ ಮಾಡಲು ಬಹು ಉಪಯುಕ್ತವಾಗುತ್ತದೆ ಎನ್ನುತ್ತಾರೆ ಇಲ್ಲಿನ ಪ್ರಗತಿ ಪರ ರೈತರುಗಳಾದ ಜವರೇಗೌಡ ರಂಗಪ್ಪ ನಾಗರಾಜು ಮೋಹನ ತಿಮ್ಮಪ್ಪ ಸೇರಿದಂತೆ ಅನೇಕರು ಕಾಲುವೆ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ವಿದ್ಯುತ್ ಇಲಾಖೆಯವರು ನಾಲೆಯ ಸಮೀಪದ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಬೇಕೆಂದು ರೈತರ ಒತ್ತಾಯವಾಗಿದೆ ಇದರ ಜೊತೆಯಲ್ಲಿ ಕಾಡಿನಂಚಿನ ಭಾಗದಲ್ಲಿ ಅರಣ್ಯ ಇಲಾಖೆಯವರು ತೆಗೆದಿರುವ ಆನೆ ಕಂದಕಗಳು ಮುಚ್ಚಿಕೊಂಡಿವೆ ಅಲ್ಲದೆ ಬೃಹತ್ ಗಾತ್ರದ ಕಲ್ಲುಗಳು ಕಂದಕದ ಮದ್ಯ ಇರುವುದನ್ನು ತೆಗೆಯಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ