ಹಾಕತ್ತೂರು, ಏ. ೧೮: ಬದರ್ ಬಾಯ್ಸ್ ಹಾಕತ್ತೂರು ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಹಾಕತ್ತೂರು ಶಾಲಾ ಮೈದಾನದಲ್ಲಿ ನಡೆದ ಪಂಚಾ ಯಿತಿ ವ್ಯಾಪ್ತಿಯ ಒಂಭತ್ತು ತಂಡಗಳ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಂ ಅಜಾದಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಜಾಕ್ ಮಾಲೀಕತ್ವದ ಟೀಂ ಅಜಾದಿ ತಂಡವು ಹುಸೈನಾರ್ ಮಾಲೀಕತ್ವದ ಕುಟ್ಟಿ ವಾರಿಯರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿ ಸಿತು. ಮೂರನೇ ಬಹುಮಾನವನ್ನು ಪೌಂಡ್ ಹಿಟ್ಟರ್ಸ್ ಹಾಗೂ ನಾಲ್ಕನೇ ಬಹುಮಾನವನ್ನು ರೆಡ್ ವಿಂಗ್ಸ್ ತಂಡ ಪಡೆಯಿತು. ಮೊದಲನೇ ಬಹುಮಾನ ವಾಗಿ ರೂ. ೪೫ ಸಾವಿರ ನಗದು, ಟ್ರೋಫಿ, ಎರಡನೇ ಬಹುಮಾನವಾಗಿ ರೂ. ೩೫ ಸಾವಿರ ನಗದು, ಟ್ರೋಫಿ, ಮೂರನೇ ಬಹುಮಾನವಾಗಿ ರೂ. ೧೦ ಸಾವಿರ ನಗದು, ಟ್ರೋಫಿ ಮತ್ತು ನಾಲ್ಕನೇ ಬಹುಮಾನವಾಗಿ ಟ್ರೋಫಿ ಯನ್ನು ನೀಡಲಾಯಿತು.
ಕ್ರೀಡಾಕೂಟದ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಮುತ್ತಲಿಬ್, ಬೆಸ್ಟ್ ಬೌಲರ್ ಪೌಂಡ್ ಹಿಟ್ಟರ್ಸ್ ತಂಡದ ನಿಧಿ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್ಮಾನ್ ಕೈಚೂರ ರಾಯಲ್ ತಂಡದ ಅಲಿ, ಬೆಸ್ಟ್ ಕ್ಯಾಚರ್ ಬ್ರದರ್ ಬಾಯ್ಸ್ ತಂಡದ ಸಂತೋಷ್ ಬಹುಮಾನ ಪಡೆದುಕೊಂಡರು.
ಸಮಾರೋಪದ ಸಮಾರಂಭ ದಲ್ಲಿ ದಿವಾಕರ್, ಅಬೂಬಕ್ಕರ್, ಮಾಚಯ್ಯ, ಖಾಲಿದ್ ಹಾಜಿ, ಕೃಷ್ಣ, ಸುಕುಮಾರ, ಖಾಸಿಂ ಸೇರಿದಂತೆ ಮತ್ತಿತರರು ಇದ್ದರು.