ಮಡಿಕೇರಿ, ಏ. ೧೮: ೨೦೧೮ ರ ಆಗಸ್ಟ್ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ತೋಟ, ಗದ್ದೆ ಹಾನಿಗೊಳಗಾಗಿ ಆದಾಯ ಮೂಲ ಕಳೆದುಕೊಂಡ ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರಿಗೆ ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್ ಸ್ವಾವಲಂಬಿ ಜೀವನದ ಪರ್ಯಾಯ ಮಾರ್ಗ ರೂಪಿಸಿಕೊಟ್ಟಿತ್ತು.

ಈಗಾಗಲೇ ಹೊಲಿಗೆಯಲ್ಲಿ ಉತ್ತಮ ತರಬೇತಿ ಪಡೆದುಕೊಂಡಿದ್ದರೂ ಕೊರೊನಾ ಹಿನ್ನೆಲೆಯಲ್ಲಿ ಈಗಿನ ದಿನಗಳಲ್ಲಿ ನಿರುದ್ಯೋಗ ಎದುರಿಸುತ್ತಿರುವ ಮಹಿಳೆಯರಿಗೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಮಡಿಕೇರಿಯಲ್ಲಿಯೇ ಹೊಲಿಗೆ ಸಂಬAಧಿತ ಉದ್ಯೋಗಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಹೊಲಿಗೆ ತರಬೇತಿ ಪಡೆಯಲು ಆಸಕ್ತ ಮಹಿಳೆಯರು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಸಮೀಪದಲ್ಲಿರುವ ಭಾರತೀಯ ವಿದ್ಯಾಭವನದ ಕಚೇರಿ ಅವಧಿಯಲ್ಲಿ (ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ) ಮೇ ೫ ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳುವAತೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೯೩೮೦೩ ೫೪೨೫೯ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವುದು.