ವೀರಾಜಪೇಟೆ, ಏ. ೧೮: ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆಯ ರಾಜ್ಯ ಹೆದ್ದಾರಿಯ ಅಗಲೀಕರಣ ವಿವಾದಕ್ಕೆ ಸಂಬAಧಿಸಿದAತೆ ತಡೆಯಾಜ್ಞೆಯನ್ನು ರಾಜ್ಯದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಖ್ಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕ ಅವರು ಮುಂದುವರೆಸಿದ್ದಾರೆ. ಲೋಕೋಪ ಯೋಗಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಾಲಯ ಪರಿಶೀಲಿಸಿದ್ದು ಅಪಾಯದ ಅಂಚಿನಲ್ಲಿರುವ ಮಲೆ ಮಹದೇವರಬೆಟ್ಟದ ರಕ್ಷಣೆಗಾಗಿ ಭೂಗಣಿ ಇಲಾಖೆಯ ತಜ್ಞರ ಸಲಹೆಯಂತೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುವಂತೆ ಆದೇಶಿಸಿದ್ದಾರೆ.

ರಾಜ್ಯ ಉಚ್ಚನ್ಯಾಯಾಲಯದ ವಕೀಲರುಗಳಾದ ಎನ್. ರವೀಂದ್ರನಾಥ್ ಕಾಮತ್ ಹಾಗೂ ಟಿ.ಪಿ. ರಘುಪತಿ ಅವರು ಕಾವೇರಿ ಸೇನೆಯ ಪರವಾಗಿ ವಾದ ಮಂಡಿಸಿ ಅಪಾಯದ ಅಂಚಿನಲ್ಲಿರುವ ಮಲೆತಿರಿಕೆಬೆಟ್ಟದ ಕುಸಿಯುವ ಹಂತದಲ್ಲಿದೆ. ಇತ್ತೀಚೆಗೆ ಮೇಲ್ಮನೆಯಲ್ಲಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ನೀಡಿದ ಉತ್ತರದಲ್ಲಿ ಮಲೆತಿರಿಕೆ ಬೆಟ್ಟ ಕಳೆದ ಬಾರಿಯ ಪ್ರಕೃತಿ ವಿಕೋಪದಿಂದ ಹಾನಿಗೊಳ ಗಾಗಿದ್ದು ಈ ಬೆಟ್ಟದಲ್ಲಿ ವಾಸಿಸುತ್ತಿರುವ ಸುಮಾರು ೬೬ ಕುಟುಂಬಗಳಿಗೆ ಪುನರ್ವಸತಿ

(ಮೊದಲ ಪುಟದಿಂದ) ಕಲ್ಪಿಸಲು ಬಿಟ್ಟಂಗಾಲದ ಬಳಿಯ ಅಂಬಟ್ಟಿಯಲ್ಲಿ ಜಾಗ ಖರೀದಿಸಿ ಕ್ರಮ ಕೈಗೊಳ್ಳಲಾಗಿದೆ. ಯಾರೂ ಈ ಬೆಟ್ಟದಲ್ಲಿ ಮನೆಕಟ್ಟಿಕೊಂಡು ವಾಸಿಸದಂತೆ ಸರಕಾರದಿಂದ ನೋಟೀಸ್ ಎಚ್ಚರಿಕೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದನ್ನು ವಿಭಾಗೀಯ ಪೀಠದ ಮುಂದೆ ವಕೀಲರುಗಳು ಪುನರುಚ್ಚರಿಸಿದಾಗ ಮುಂಗಾರು ಮುಂಚಿತವಾಗಿ ತಡೆಗೋಡೆ ನಿರ್ಮಿಸಲು ವಿಭಾಗೀಯ ಪೀಠದ ನ್ಯಾಯಮೂರ್ತಿ ಓಕ ಅವರು ಸರಕಾರಕ್ಕೆ ನಿರ್ದೇಶಿಸಿದರು.

ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್, ನ್ಯಾಯಮೂರ್ತಿ ಓಕ ಅವರ ಜೊತೆಯಲ್ಲಿದ್ದು ಪ್ರಕರಣವನ್ನು ಮೇ ೩೧ಕ್ಕೆ ಮುಂದೂಡಿದ್ದಾರೆ. ಸರಕಾರದ ಪರವಾಗಿ ವಕೀಲರಾದ ವಿಜಯ್‌ಕುಮಾರ್ ಪಾಟೀಲ್ ಅವರು ವಿಭಾಗೀಯ ಪೀಠದ ಮುಂದೆ ಮಲೆತಿರಿಕೆಬೆಟ್ಟದ ಇಂದಿನ ಸಾಧಕ ಬಾಧಕಗಳ ಕುರಿತು ನಾಲ್ಕು ಪುಟಗಳ ಪ್ರಮಾಣ ಪತ್ರವನ್ನು ಸಲ್ಲಿಸಿದರು. - ಡಿ.ಎಂ.ಆರ್.