ಈ ಪಂದ್ಯಾವಳಿಯಲ್ಲಿ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಮೂಕಳಮಾಡ ಅರಸು ನಂಜಪ್ಪ, ಮಲಚೀರ ಆಶಾ ಗಣೇಶ್, ಚೆಪ್ಪುಡೀರ ಬೋಪಣ್ಣ, ಚೆಪ್ಪುಡೀರ ರೂಪ ಉತ್ತಪ್ಪ, ಮಲಚೀರ ತನುಜ ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಫೈನಲ್ ಹಣಾಹಣಿಯಲ್ಲಿ ನೀಲ್ ಮತ್ತು ರಕ್ಷಿತ್ ಜೋಡಿಯ ತಂಡ ಜಯಶೀಲರಾದರು. ಹರ್ಷಾದ್ ಮತ್ತು ಶದಾಯಿತ್ ಜೋಡಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟರು. ಪಂದ್ಯಾವಳಿಯ ಆಯೋಜಕರಾಗಿ ತಿರುನೆಲ್ಲಿಮಾಡ ದರ್ಶನ್ ಕರುಂಬಯ್ಯ, ಚೆಪ್ಪುಡೀರ ಕಾರ್ತಿಕ್ ಕುಟ್ಟಪ್ಪ, ನೌಶಾದ್, ಸಾದಿಕ್ ಪಂದ್ಯಾವಳಿಯನ್ನು ಸಂಘಟಿಸಿದರು.
ಕೊಡಗಿನಾದ್ಯಂತ ೪೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಿಕುಟ್ಟಿರ ಭೀಮಯ್ಯ, ಪೆಮ್ಮಂಡ ಅಪ್ಪಯ್ಯ, ಕಾಟಿಮಾಡ ರಾಜಪ್ಪ, ಕೋಳೇರ ಸಂಜು ಭಾಗವಹಿಸಿದ್ದರು.