ಮಡಿಕೇರಿ, ಏ. ೧೮: ಭಾರತ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಕೊಡಗಿನ ಪುಳ್ಳಂಗಡ ರಾಜೇಶ್ ಬೋಪಣ್ಣ ಇದೀಗ ಬಾಡಿ ಬಿಲ್ಡರ್ ಆಗಿ ಗಮನ ಸೆಳೆದಿದ್ದಾರೆ. ವರ್ಲ್ಡ್ ಫಿಟ್‌ನೆಸ್ ಫೆಡರೇಶನ್ (Wಈಈ) ಸೂತ್ರದಡಿಯಲ್ಲಿ ಜರುಗಿದ ಕರ್ನಾಟಕ ಬಾಡಿ ಬಿಲ್ಡರ್ ಚಾಂಪಿಯನ್‌ಶಿಪ್‌ನಲ್ಲಿ ಬೋಪಣ್ಣ ೫ನೇ ಸ್ಥಾನದ ಸಾಧನೆ ಮಾಡಿದ್ದಾರೆ.

೨೦೦೨ರಲ್ಲಿ ಭಾರತ ಹಾಕಿ ತಂಡದ ಗೋಲ್‌ಕೀಪರ್ ಆಗಿದ್ದ ಇವರು ಬೆಸಗೂರು ಗ್ರಾಮದ ಮಾಜಿ ಸೈನಿಕ ಪುಳ್ಳಂಗಡ ಉಪೇಂದ್ರ ಹಾಗೂ ಕಾವೇರಿ ದಂಪತಿಯ ಪುತ್ರ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್)ನ ಆಟಗಾರರಾಗಿಯೂ ಇದ್ದ ಇವರು ಇದೀಗ ಸಂಸ್ಥೆಯಲ್ಲಿ ಅಧಿಕಾರಿಯಾಗಿದ್ದಾರೆ. ಇವರ ಪತ್ನಿ ರೋಹಿಣಿ ಬೋಪಣ್ಣ ಕೂಡ ಅಂತರರಾಷ್ಟಿçÃಯ ಹಾಕಿ ತಾಂತ್ರಿಕ ಸಮಿತಿ ಪ್ರಮುಖರಾಗಿದ್ದಾರೆ