ಮಡಿಕೇರಿ, ಏ. ೧೮: ಕೊಡಗಿನ ಯುವತಿ ಚೌರೀರ ಭವಿಷ್ಯ ಅವರು ಫ್ರಾನ್ಸ್ನ ಸ್ಟಾಸ್ಟರ್ಗ್ ವಿಶ್ವವಿದ್ಯಾನಿಲಯದ ಪಿಎಚ್ಡಿ ಪದವಿಯನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ‘ಎಕ್ಸ್ಫ್ಲೋರಿಂಗ್ ನ್ಯಾನೋ ಟ್ರಾನ್ಸ್ಫೋರ್ಟ್ ಪಾಥ್ ಫಾರ್ ಇನ್ಫಾರ್ಮೇಶನ್ ಎನ್ಕೋಡಿಂಗ್ ಅಂಡ್ ಎನರ್ಜಿ ಹಾರ್ವೆಸ್ಟಿಂಗ್’ ಎಂಬ ವಿಷಯದ ಕುರಿತು ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭ್ಯವಾಗಿದೆ. ಈ ಮಹಾ ಪ್ರಬಂಧದ ಹೊಸತನಕ್ಕೆ ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಗೆ ಮೂರು ದೇಶಗಳ ಗೌರವಾನ್ವಿತ ತೀರ್ಪುಗಾರರು ತಮ್ಮ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಭವಿಷ್ಯ ವೀರಾಜಪೇಟೆಯ ತಿಮ್ಮಯ್ಯ ಲೇಔಟ್ನ ನಿವಾಸಿ ಚೌರೀರ ಪೂವಣ್ಣ ಹಾಗೂ ಸುನಿತಾ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಫ್ರಾನ್ಸ್ನಲ್ಲಿದ್ದಾರೆ.