ಗೋಣಿಕೊಪ್ಪ ವರದಿ, ಏ. ೧೮ ; ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ಕೌಟುಂಬಿಕ ಬಲ್ಯಂಡ ಕ್ರಿಕೆಟ್ ಕಪ್ ಅನ್ನು ಅಮ್ಮತ್ತೀರ ತಂಡ ಗೆದ್ದುಕೊಂಡಿದ್ದು, ಎರಡನೇ ಬಾರಿಗೆ ಗೋಣಿಕೊಪ್ಪ ವರದಿ, ಏ. ೧೮ ; ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ಕೌಟುಂಬಿಕ ಬಲ್ಯಂಡ ಕ್ರಿಕೆಟ್ ಕಪ್ ಅನ್ನು ಅಮ್ಮತ್ತೀರ ತಂಡ ಗೆದ್ದುಕೊಂಡಿದ್ದು, ಎರಡನೇ ಬಾರಿಗೆ ೬೩ ರನ್ ದಾಖಲಿಸಿತು. ಅಮ್ಮತ್ತೀರ ೫ ಚೆಂಡು ಬಾಕಿ ಉಳಿದಿರುವಂತೆ ೩ ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು. ಆಂಡಮಾಡ ಪವನ್ ೩೭ ರನ್, ಅಮ್ಮತ್ತೀರ

(ಮೊದಲ ಪುಟದಿಂದ) ಗಣೇಶ್ ೪೨ ರನ್ ಗಳಿಸಿದರು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬಲ್ಯಂಡ ತಂಡವು ಮಂಜುವAಡ ವಿರುದ್ದ ೬ ವಿಕೆಟ್ ಜಯ ಸಾಧಿಸಿತು. ಅಮ್ಮತ್ತೀರ ತಂಡವು ಪುತ್ತಾಮನೆ ತಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿ ಸೆಮಿ ಫೈನಲ್‌ಗೆ ಪ್ರವೇಶ ಪಡೆಯಿತು. ಆಂಡಮಾಡ ತಂಡವು ಚೊಟ್ಟೋಳಿಯಮ್ಮಂಡ ವಿರುದ್ದ ೯ ವಿಕೆಟ್ ಜಯ ಪಡೆಯಿತು. ಸೆಮಿ ಫೈನಲ್‌ನಲ್ಲಿ ಅಮ್ಮತ್ತೀರ ತಂಡವು ಅತಿಥೇಯ ಬಲ್ಯಂಡ ವಿರುದ್ದ ೬ ವಿಕೆಟ್ ಜಯ ಸಾಧಿಸಿತು. ೨ ನೇ ಸೆಮಿ ಫೈನಲ್‌ನಲ್ಲಿ ಆಂಡಮಾಡ ತಂಡವು ಕೊಂಡಿಜಮ್ಮAಡ ವಿರುದ್ದ ೮ ವಿಕೆಟ್ ಅಂತರದಲ್ಲಿ ಗೆಲುವು ಪಡೆಯಿತು.

ಸರಣಿ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಅಮ್ಮತ್ತೀರ ತಂಡದ ಗಣೇಶ್ ಪಡೆದುಕೊಂಡರು. ಆಂಡಮಾಡ ಪವನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.

ಸಮಾರೋಪ ; ಬಲ್ಯಂಡ ಕುಟುಂಬ ಅಧ್ಯಕ್ಷ ಬಲ್ಯಂಡ ಎಸ್ ಪ್ರತಾಪ್ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ಕಮಟೆ ಮಹಾದೇವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಣ್ಣುವಂಡ ಬಿ ರಮೇಶ್, ಕೊಡವ ಅಕಾಡೆಮಿ ಮಾಜಿ ಸದಸ್ಯ ಉಮೇಶ್ ಕೇಚಮಯ್ಯ, ಹಿರಿಯರಾದ ಅಮ್ಮತ್ತೀರ ರೇವತಿ ಪರಮೇಶ್ವರ್, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ ಬಹುಮಾನ ವಿತರಿಸಿದರು.

ಹೆಮ್ಮಚ್ಚಿಮನೆ ಕಪ್ ; ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಕಪ್ ಅನ್ನು ಮುಂದಿನ ವರ್ಷ ಹೆಮ್ಮಚ್ಚಿಮನೆ ಕುಟುಂಬ ನಡೆಸುವುದಾಗಿ ಈ ಸಂದರ್ಭ ಘೋಷಿಸಲಾಯಿತು.

ಮಧ್ಯಾಹ್ನ ೩ ಗಂಟೆಗೆ ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆ ಕಾರಣ ಸುಮಾರು ೨ ಗಂಟೆ ಕಾಲ ವಿಳಂಭವಾಗಿ ಆರಂಭವಾಯಿತು. ಮೈದಾನದಲ್ಲಿ ಕೆಸರಿನ ನಡುವೆಯೂ ಆಟವಾಡುವ ಮೂಲಕ ಕ್ರೀಡಾಪಟುಗಳು ಗಮನ ಸೆಳೆದರು.