ಚೆಟ್ಟಳ್ಳಿ, ಏ. ೧೭: ಚೆಟ್ಟಳ್ಳಿ ಶ್ರೀ ಶ್ರೀಮಂಗಲ ಭಗವತಿ ದೇವಾಲಯದ ವಾರ್ಷಿಕೋತ್ಸವ ತಾ. ೧೪ ಮತ್ತು ೧೫ರಂದು ಶ್ರದ್ಧಾಭಕ್ತಿಯಿಂದ ನೇರವೇರಿತು.

ತಾ. ೧೪ ರಂದು ನಡೆದ ಪಟ್ಟಣಿ ಹಬ್ಬದಂದು ಮಧ್ಯಾಹ್ನ ಮುಳ್ಳಂಡ ಐನ್ ಮನೆಯಿಂದ ದೇವತಕ್ಕ ಮುಳ್ಳಂಡ ಕರಣ್ ಕಾವೇರಪ್ಪ ದೇವ ಭಂಡಾರವನ್ನು ಹೊತ್ತು ಎತ್ತು ಪೋರಾಟ ಒಡ್ಡೋಲಗ ದುಡಿ ಕೊಟ್ಟ್ ಹಾಡಿನೊಂದಿಗೆ ಊರವರು ದೇವಾಲಯಕ್ಕೆ ತೆರಳಲಾಯಿತು. ಚೌರಿಯಾಟ್, ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು.

ತಾ. ೧೫ ರಂದು ದೊಡ್ಡ ಹಬ್ಬ ಊರವೆಲ್ಲ ಸೇರಿ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಚೌರಿಯಾಟ್, ತೆಂಗಿನಕಾಯಿ ಎಳೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರಿಗೆ ವಿಶೇಷ ಪೂಜೆ, ಭಕ್ತಾದಿಗಳು ಹರಕೆ ಕಾಣಿಕೆಯನ್ನು ಅರ್ಪಿಸಿದರು. ದೇವರ ದೀಪವನ್ನು ಬೊಳಕ್ ಮರದಿಂದ ದೇವಾಲಯದ ಗರ್ಭಗುಡಿಯಲ್ಲಿಡಲಾಯಿತು. ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಿತು.