ಮಡಿಕೇರಿ, ಏ. ೧೭: ಕಾವೇರಿ ಜನ್ಮ ಭೂಮಿ ಟ್ರಸ್ಟ್, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿ ಮಡಿಕೇರಿ ಕೋಟೆಯೊಳಗೆ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ನಿರ್ಮಾಣಕ್ಕೆ ಕೋರಿ ಮಡಿಕೇರಿಯ ಅಪರ ಸಿವಿಲ್ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ನ್ಯಾಯಾಲಯ ವಜಾಗೊಳಿಸಿರುವುದಾಗಿ ಕಾವೇರಿ ಸೇನೆ ಜಿಲ್ಲಾಧ್ಯಕ್ಷ ರವಿ ಚಂಗಪ್ಪ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲ್ಲಿ ಮಾತನಾಡಿದ ಅವರು, ಗುಡ್ಡೆಮನೆ ಅಪ್ಪಯ್ಯ ಅವರು ಚರಿತ್ರೆಯಲ್ಲಿ ದಾಖಲಾಗದ ವ್ಯಕ್ತಿ. ಅವರು ಹೋರಾಟಗಾರ ಎಂದು ಬಿಂಬಿಸಲಾಗಿದೆ. ಅಲ್ಲದೆ ಮಡಿಕೇರಿ ಕೋಟೆಯ ಸಂಪೂರ್ಣ ಜವಾಬ್ದಾರಿ ಭಾರತೀಯ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಕೋಟೆಯ ಸರಹದ್ದಿನೊಳಗೆ ಬೇರೆಯವರ ಹಸ್ತಕ್ಷೇಪಕ್ಕೆ ಆಗಲಿ, ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಕಾವೇರಿ ಸೇನೆ ಸಲ್ಲಿಸಿರುವ ಪ್ರತಿದಾವೆಯನ್ನು ನ್ಯಾಯಾಲಯ ಆಲಿಸಿ ನ್ಯಾಯ ದೊರಕಿಸಿಕೊಟ್ಟಿದೆ ಎಂದರು. ನ್ಯಾಯಾಲಯದ ಆದೇಶದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಕೀಲ ಬಿ.ಎ. ಮಾಚಯ್ಯ ಮಾತನಾಡಿ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಸುಳ್ಳು ಇತಿಹಾಸ ಸೃಷ್ಟಿಸಲು ಮುಂದಾಗಿ ಕೆಲವು ಸಂಘಟನೆಗಳು ಸೋತಿವೆ. ಸ್ವಾತಂತ್ರö್ಯ ಹೋರಾಟಗಾರನೆಂದು ಬಿಂಬಿಸಲಾಗಿದೆ. ಕೋಟೆ ರಾಷ್ಟಿçÃಯ ಸ್ಮಾರಕವಾಗಿದ್ದು, ಅಲ್ಲಿ ಅಪ್ಪಯ್ಯಗೌಡರ ಪ್ರತಿಮೆ ನಿರ್ಮಿಸಬಾರದು ಎಂದು ಕೋರ್ಟ್ ತೀರ್ಪು ನೀಡಿದೆ. ಕಾವೇರಿ ಸೇನೆಯ ಹೋರಾಟದಿಂದ ಸುಳ್ಳು ಇತಿಹಾಸ ನಾಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾವೇರಿ ಸೇನೆ ಉಪಾಧ್ಯಕ್ಷ ರಘು ಮಾಚಯ್ಯ, ಪ್ರಮುಖ ಬಿ.ಎಂ. ಗಣಪತಿ ಇದ್ದರು.