ಪೊನ್ನಂಪೇಟೆ. ಏ. ೧೭: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಕಿಗ್ಗಟ್‌ನಾಡ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಫೈನಲ್ ಪ್ರವೇಶಕ್ಕಾಗಿ, ಹುದಿಕೇರಿ ವಾರಿಯರ್ಸ್, ಕಣ್ಣನ್ ಟೈಯರ್ಸ್, ಕಿಗ್ಗಟ್‌ನಾಡ್ ಕೊಡವ ಕ್ರಿಕೆಟರ್ಸ್ ಹಾಗೂ ಫಾರೆಸ್ಟ್ ಹಿಲ್ ಕ್ರಿಕೆಟ್ ಕ್ಲಬ್ ನಡುವೆ ಹಣಾಹಣಿ ನಡೆಯಲಿದೆ.

ಫಲಿತಾಂಶ: ಹುದಿಕೇರಿ ವಾರಿಯರ್ಸ್ ವಿರುದ್ಧ ಅರ್ವತೊಕ್ಲು ಪ್ರತಿಭಾ ಕ್ರಿಕೆಟರ್ಸ್ ೯ ವಿಕೆಟ್‌ಗಳ ಜಯ ಸಾಧಿಸಿದರೆ, ಕಿಗ್ಗಟ್‌ನಾಡ್ ಕೊಡವ ಕ್ರಿಕೆಟರ್ಸ್, ಎ.ಜೆ. ಬಾಯ್ಸ್ ವಿರುದ್ಧ ೭ ರನ್‌ಗಳ ಜಯ ದಾಖಲಿಸಿತು. ಕಾಕೂರು ಬಿ ವೈ ಸಿ ವಿರುದ್ಧ ಪ್ರತಿಭಾ ಕ್ರಿಕೆಟರ್ಸ್ ೫ ವಿಕೆಟ್‌ಗಳ ಜಯಭೇರಿ ಬಾರಿಸಿತು. ಕಿಗ್ಗಟ್‌ನಾಡ್ ಕೊಡವ ಕ್ರಿಕೆಟರ್ಸ್, ಕಾಕೂರು ಬಿವೈಸಿ ವಿರುದ್ಧ ೫ ವಿಕೆಟ್‌ಗಳಲ್ಲಿ ಗೆಲುವು ಕಂಡಿತು.

ಪ್ರತಿಭಾ ಕ್ರಿಕೆಟರ್ಸ್ ತಂಡವನ್ನು ಎ.ಜೆ. ಬಾಯ್ಸ್ ೧೯ ರನ್ನುಗಳಿಂದ ಮಣಿಸಿತು. ಕಿಗ್ಗಟ್ ನಾಡ್ ಕೊಡವ ಕ್ರಿಕೆಟರ್ಸ್ ವಿರುದ್ಧ ಹುದಿಕೇರಿ ವಾರಿಯರ್ಸ್ ೮ ವಿಕೆಟ್‌ಗಳಲ್ಲಿ ಗೆದ್ದಿತು. ಎ.ಜೆ. ಬಾಯ್ಸ್ ವಿರುದ್ಧ ಹುದಿಕೇರಿ ವಾರಿಯರ್ಸ್ ೧೦ ವಿಕೆಟ್‌ಗಳ ಜಯ ಸಾಧಿಸಿತು. ಪ್ರತಿಭಾ ಕ್ರಿಕೆಟರ್ಸ್ ವಿರುದ್ಧ ಕಿಗ್ಗಟ್‌ನಾಡ್ ಕೊಡವ ಕ್ರಿಕೆಟರ್ಸ್ ೯ ವಿಕೆಟ್‌ಗಳ ವಿಜಯಿಶಾಲಿಯಾಯಿತು. ಎ.ಜೆ. ಬಾಯ್ಸ್ ತಂಡವನ್ನು ಕಾಕೂರು ಬಿವೈಸಿ ೫೭ ರನ್ನುಗಳಿಂದ ಸೋಲಿಸಿತು. ಹುದಿಕೇರಿ ವಾರಿಯರ್ಸ್, ಕಾಕೂರು ಬಿವೈಸಿ ವಿರುದ್ಧ ೩೧ ರನ್‌ಗಳಿಂದ ಗೆದ್ದುಕೊಂಡಿತು.