ಮಡಿಕೇರಿ, ಏ. ೧೭: ಮಡಿಕೇರಿ ತಾಲೂಕಿನ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ ಹತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ೨೦೨೧ರ ಚುನಾವಣೆ ನಿಮಿತ್ತ ಕ್ಷೇತ್ರವಾರು ಪುನರ್ ವಿಂಗಡಣೆ ಯಾಗಿರುವ ಕರಡು ಮತದಾರರ ಪಟ್ಟಿಯನ್ನು ಮುದ್ರಿಸಿಕೊಂಡು ತಾ. ೧೭ ರಂದು ತಾಲೂಕು ಕಚೇರಿ ಹಾಗೂ ನಾಡ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಲಾಗಿದೆ.

ಕರಡು ಮತದಾರರ ಪ್ರಕಟಣೆಯ ಸಂಬAಧ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ತಾ. ೨೨ರ ಒಳಗೆ ತಾಲೂಕು ಕಚೇರಿಗೆ ಸಲ್ಲಿಸಬಹುದಾಗಿದೆ. ಇತ್ಯರ್ಥಪಡಿಸಿದ ನಂತರ ತಾ. ೩೦ ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.