ಮಡಿಕೇರಿ, ಏ. ೧೭: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಆತಿಥೇಯ ವೈಲ್ಡ್ ಮಾರ್ಷಲ್ ತಂಡ ಆಳ್ವಾಸ್ ಮೂಡುಬಿದಿರೆ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಟೀಂ ಮ್ಯಾಕ್ಸ್ ವೆಲ್ ತಂಡವನ್ನು ಮಣಿಸಿ ವೈಲ್ಡ್ ಮಾಸ್ಟರ್ಸ್, ಮೈಸೂರು ಮೂನ್ ಸ್ಟಾರ್ ತಂಡವನ್ನು ಸೋಲಿಸಿ ಆಳ್ವಾಸ್ ಮೂಡುಬಿದಿರೆ ಫೈನಲ್ ಪ್ರವೇಶಿಸಿತು. ಅಂತಿಮ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಆಳ್ವಾಸ್ ತಂಡ ನಿಗದಿತ ೨೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೩೯ ರನ್ ಗುರಿ ನೀಡಿತು. ಗುರಿ ಬೆನ್ನತ್ತಿದ ವೈಲ್ಡ್ ಮಾರ್ಷಲ್ ೧೯.೨ ಓವರ್ ಗೆ ೬ ವಿಕೆಟ್ ಕಳೆದುಕೊಂಡು ೧೪೧ ಗಳಿಸಿ ವಿಜಯ ಸಾಧಿಸಿತು.