ಕುಶಾಲನಗರ, ಏ. ೧೬. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ನಡುವೆ ಜಿಲ್ಲೆಯಲ್ಲಿ ಶೇ. ೧೬ ರಷ್ಟು ಸರಕಾರಿ ಬಸ್ಸುಗಳು ಸಂಚಾರ ಪ್ರಾರಂಭಿಸಿವೆ ಎಂದು ಕುಶಾಲನಗರ ಸರಕಾರಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಶ್ಯಾಮ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
‘ಶಕ್ತಿ’ ಯೊಂದಿಗೆ ಮಾತನಾಡಿದ ಅವರು ಕುಶಾಲನಗರ ಬಸ್ ನಿಲ್ದಾಣದ ಮೂಲಕ ೪೦೦ ಬಸ್ ಮಾರ್ಗಗಳು ಕಾರ್ಯಾಚರಣೆ ನಡೆಸಬೇಕಾಗಿದ್ದು, ಗುರುವಾರ ೬೪ ಬಸ್ ಮಾರ್ಗಗಳು ಸಂಚಾರಕ್ಕೆ ಲಭ್ಯವಾಗಿವೆ, ಮಡಿಕೇರಿ, ಮಂಗಳೂರು, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸುತ್ತವೆ ಎಂದಿದ್ದಾರೆ. ಖಾಸಗಿ ಬಸ್‌ಗಳು ಕೂಡಾ ಜತೆಯಲ್ಲಿ ಸಂಚಾರ ಮಾಡುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮಾದಾಪಟ್ಟಣ ಬಳಿ ಕರ್ತವ್ಯ ನಿರತ ಚಾಲಕನ ಮೇಲೆ ನಡೆದ ಘಟನೆಗೆ ಸಂಬAಧಿಸಿದAತೆ ಕುಶಾಲನಗರದ ಠಾಣೆಯಲ್ಲಿ ಕೆಲವು ಮುಷ್ಕರ ನಿರತ ನೌಕರರ ಮೇಲೆ ಮೊಕದ್ದಮೆ ದಾಖಲಾಗಿದೆ. ಮಡಿಕೇರಿ ಘಟಕದ ಅಧಿಕಾರಿಗಳ ದೂರಿನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. - ಚಂದ್ರ ಮೋಹನ್