ನಾಪೋಕ್ಲು, ಏ. ೧೬: ಕ್ರೀಡಾಕೂಟಗಳನ್ನು ನಡೆಸುವದರಿಂದ ಹೆಚ್ಚು ಹೆಚ್ಚು ಕ್ರೀಡಾ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ ಎಂದು ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಮಾಳೆಯಂಡ ಅಶೋಕ್ ಪೂವಯ್ಯ ಹೇಳಿದರು.

ನಾಪೋಕ್ಲು ಕೊಡವ ಸಮಾಜದ ಸಾಂಸ್ಕೃತಿಕ ಕ್ರೀಡಾ ಮತ್ತು ಮನರಂಜನಾ ಕೂಟದ ವತಿಯಿಂದ ೩ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ವರ್ಷದ ಕೊಡವ ಮುಕ್ತ ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಕಠಿಣ ಶ್ರಮ ಬೇಕು.

ಗ್ರಾಮೀಣ ಪ್ರದೇಶ ಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ನಡೆಸುತ್ತಿರುವದು ಶ್ಲಾಘನೀಯ. ಇದರಿಂದ ಕಲಿಯಲು ಆಸಕ್ತಿಯಿರುವ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಡಬಲ್ಸ್ ಪಂದ್ಯಕ್ಕಿAತಲೂ ಸಿಂಗಲ್ಸ್ ಪಂದ್ಯದಿAದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಕೊಡವರು ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆ ಮಾಡಿದ್ದಾರೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ನಾಪೋಕ್ಲು ಕೊಡವ ಸಮಾಜದ ಸಾಂಸ್ಕೃತಿಕ ಕ್ರೀಡಾ ಮತ್ತು ಮನರಂಜನಾ ಕೂಟದ ಮಾಜಿ ಅಧ್ಯಕ್ಷ ಕಾಂಡAಡ ಜೋಯಪ್ಪ ಮಾತನಾಡಿ, ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತರಬೇತಿ ಶಿಬಿರಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಪೋಕ್ಲು ಕೊಡವ ಸಮಾಜದ ಸಾಂಸ್ಕೃತಿಕ ಕ್ರೀಡಾ ಮತ್ತು ಮನರಂಜನಾ ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವದು ನಮ್ಮ ಮುಖ್ಯ ಉದ್ದೇಶವಾಗಿದೆ. ಪಂದ್ಯಾಟದಲ್ಲಿ ೮೩ ತಂಡಗಳು ಭಾಗವಹಿಸಲಿದ್ದು, ೭ ವಿಭಾಗಗಳಲ್ಲಿ ಪಂದ್ಯಾಟಗಳು ನಡೆಯಲಿದೆ. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ನೀಡ ಲಾಗುವದು. ಮಕ್ಕಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ನಮ್ಮ ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ತರಬೇತಿ ಶಿಬಿರಗಳು ನಡೆಸಲಾಗುವದು ಎಂದರು ಹೇಳಿದರು. ಕಾರ್ಯಕ್ರಮದಲ್ಲಿ ಕೇಲೇಟಿರ ದಿವ್ಯಾ ರತ್ನ ಪ್ರಾರ್ಥನೆ, ಮಂಡೀರ ರಾಜಪ್ಪ ಸ್ವಾಗತ, ಶಿವಚಾಳಿಯಂಡ ರೋಹಿಣಿ ನಿರೂಪಿಸಿ, ಕನ್ನಂಬಿರ ಸುಧಿ ತಿಮ್ಮಯ್ಯ ವಂದಿಸಿದರು.

ಕೊಡವ ಸಮಾಜದ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ವತಿಯಿಂದ ಕೊಡವ ಸಮಾಜದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಈ ಕೆಳಗಿನವರು ವಿಜಯಶಾಲಿಗಳಾಗಿ ಹೊರ ಹೊಮ್ಮಿದ್ದಾರೆ.

೧೫ ವರ್ಷದ ಬಾಲಕಿಯರ ವಿಭಾಗ: ೧, ಶಿವಚಾಳಿಯಂಡ ಮನ್ಯ (ಪ್ರ) ಶಿವಚಾಳಿಯಂಡ ದೇಚಕ್ಕ (ದ್ವಿ). ೧೫ ಡಬಲ್ಸ್ ಬಾಲಕರ ವಿಭಾಗ : ಬೊಪ್ಪೇರ ರಿತೇಶ್, ಕಂಗಾAಡ ಆಕಾಶ್ (ಪ್ರ) ಕಡೇಮಡ ಅರಸ್, ಮೂಕೊಂಡ ಅಯ್ಯಪ್ಪ (ದ್ವಿ). ೧೫ + ಡಬಲ್ಸ್ : ಬೊಪ್ಪೇರ ಹಿತೇಶ್, ಕುಲ್ಲೇಟಿರ ಸುಭಂ, (ಪ್ರ), ಚೇಂದ್ರಿಮಾಡ ಮುತ್ತಣ್ಣ, ಕೊಯಿತಂಡ ಲಿಖಿತ (ದ್ವಿ). ಮಹಿಳಾ ಡಬಲ್ಸ್ : ಶಿವಚಾಳಿಯಂಡ ನಿತ್ಯಾ, ಪೆಮ್ಮುಡಿಯಂಡ ಪಾಯಾಲ್ (ಪ್ರ) ಕಳ್ಳಂಗಡ ಗ್ರೀಷ್ಮಾ, ಚೆಟ್ಯಾಪಂಡ ಸಹನಾ (ದ್ವಿ). ಪುರುಷರ ೨೫ + ವಿಭಾಗ : ನಂಬುಡುಮಾಡ ಅಪ್ಪಣ್ಣ, ಮೇಚಿಯಂಡ ದೇವಯ್ಯ, (ಪ್ರ) ಕೊಳ್ಳಿಮಾಡ ನಂಜಪ್ಪ, ಕುಪ್ಪಂಡ ರಜತ್, (ದ್ವಿ). ಪುರುಷರ ೪೦ + ವಿಭಾಗ : ಬೊಪ್ಪಂಡ ಭೀಮ್ಮಯ್ಯ, ಅರಮಣಮಾಡ ಸೋಮಣ್ಣ (ಪ್ರ) ಕುಲ್ಲೇಟಿರ ಲೋಕೇಶ್, ಪೊರುಕೊಂಡ ಸುನೀಲ್(ದ್ವಿ). ಪುರುಷರ ೫೦ + ವಿಭಾಗ : ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಬೊಪ್ಪೇರ ಜಯ (ಪ್ರ) ಕುಲ್ಲೇಟೀರ ಶಾಂತ ಕಾಳಪ್ಪ, ಕನ್ನಂಭಿರ ಸುಧಿ ತಿಮ್ಮಯ್ಯ (ದ್ವಿ) ಸ್ಥಾನವನ್ನು ಪಡೆದು ನಗದು ಮತ್ತು ಆಕರ್ಷಕ ಟ್ರೋಫಿಯ ಬಹುಮಾನವನ್ನು ಪಡೆದುಕೊಂಡರು.

ನAತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮತ್ತಿತರರು ಇದ್ದರು.

- ದುಗ್ಗಳ.