ಮಡಿಕೇರಿ, ಏ. ೧೬: ಮಡಿಕೇರಿ ನಗರಸಭಾ ಚುನಾವಣೆಗೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ೧೧೪ ನಾಮಪತ್ರಗಳ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, ಉಳಿದ ೧೧೩ ನಾಮಪತ್ರಗಳು ಅಂಗೀಕರಿಸಲ್ಪಟ್ಟಿವೆ.
ವಾರ್ಡ್ ನಂ. ೧೬ ರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಚಿಕೇತ್ ಎಂಬವರ ನಾಮಪತ್ರ ಜಾತಿದೃಢೀಕರಣ ಪತ್ರ ಸಲ್ಲಿಸದ ಕಾರಣ ತಿರಸ್ಕರಿಸಲ್ಪಟ್ಟಿದೆ. ೧೬ನೇ ವಾರ್ಡ್ಗೆ ಹಿಂದುಳಿದ ವರ್ಗ (ಬಿ) ಮೀಸಲಾತಿ ನಿಗದಿಯಾಗಿದೆ. ಇನ್ನುಳಿದಂತೆ ೧೧೩ ನಾಮಪತ್ರಗಳು ಅಂಗೀಕಾರಗೊAಡಿದ್ದು, ತಾ. ೧೯ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.