ಮಡಿಕೇರಿ, ಏ. ೧೬ : ತಾ. ೧೬ರಂದು ಪ್ರಕಟಗೊಂಡ ಕೂಡುಮಂಗಳೂರು ರಾಮೇಶ್ವರ ಸಂಘದ ಸುದ್ದಿಗೆ ಸಂಬAಧಿಸಿದAತೆ ಕೆನರಾ ಬ್ಯಾಂಕ್ ಸ್ಪಷ್ಟೀಕರಣ ನೀಡಿದೆ.
ಕೆನರಾ ಬ್ಯಾಂಕಿನ ಮಡಿಕೇರಿ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಪ್ರಕಾಶ್ ಜಿ.ಸಿ. ಅವರು ನೀಡಿರುವ ಲಿಖಿತ ಹೇಳಿಕೆಯಲ್ಲಿ ದಿನಾಂಕ ೨೦.೦೩.೨೦೨೧ರಂದು ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘವು ವೆಂಕಟೇಶ್ ಅವರಿಂದ ಪಡೆದಿರುವ ಅನ್ಯ ಬ್ಯಾಂಕಿನ ಚೆಕ್ಕನ್ನು ನಮ್ಮ ಕೂಡಿಗೆ ಶಾಖೆಯಲ್ಲಿ ಕ್ಲಿಯರೆನ್ಸ್ಗೆ ನೀಡಿರುತ್ತದೆ. ಬ್ಯಾಂಕಿನ ನಿಯಮದ ಪ್ರಕಾರ ಚೆಕ್ಕನ್ನು ಕ್ಲಿಯರೆನ್ಸ್ ಕ್ರಿಯೆಯಲ್ಲಿ ವೆಂಕಟೇಶ್ ಅವರ ಖಾತೆ ಇರುವ ಬ್ಯಾಂಕಿಗೆ ಕ್ಲಿಯರೆನ್ಸ್ಗಾಗಿ ನೀಡಿರುತ್ತೇವೆ. ಆದರೆ ಆ ಚೆಕ್ ಡ್ರಾಯರ್ ಮೂಲಕ ಪಾವತಿಯನ್ನು ತಡೆ ಹಿಡಿಯಲಾಗಿದೆ ಎಂಬ ಕಾರಣದಿಂದ ಚೆಕ್ ಪಾವತಿಯಾಗದೆ ಹಿಂದಿರುಗಿದ್ದರಿAದ ತಮ್ಮ ಖಾತೆಯಲ್ಲಿ ಪ್ರತಿಬಿಂಬಿಸಿದ ಜಮೆಯನ್ನು ಹಿಂಪಡೆಯಲಾಗಿದೆ. ಈ ವಿಚಾರದಲ್ಲಿ ಕೆನರಾ ಬ್ಯಾಂಕಿನ ಯಾವುದೇ ಪಾತ್ರವಿರುವುದಿಲ್ಲ.