
ಮಡಿಕೇರಿ, ಏ. ೧೫: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಜಿಲ್ಲೆಯ ಜನ ಮುಂಜಾಗ್ರತೆಯೊAದಿಗೆ ಸ್ವನಿಯಂತ್ರಣ ಹಾಕಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಕರೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಸಕಲ ಮುಂಜಾಗ್ರತೆ ವಹಿಸಿದ್ದು, ಜಿಲ್ಲಾಡಳಿತದೊಂದಿಗೆ ಜನರು ಕೈಜೋಡಿಸಿದರೆ ಸೋಂಕು ಮುಕ್ತ ಕೊಡಗು ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದರೊಂದಿಗೆ ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಂದೆ ಬರಬೇಕು. ೪೫ ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವಂತೆ ಮನವಿ ಮಾಡಿದ ಅವರು, ಅಗತ್ಯಕ್ಕೆ ತಕ್ಕಷ್ಟು ವ್ಯಾಕ್ಸಿನ್ ಹಾಗೂ ಔಷಧಿಗಳಿವೆ ಎಂದು ಮಾಹಿತಿ ನೀಡಿದರು.
ನಗರದ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮುಂದುವರೆಯಲಿದೆ. ಆಸ್ಪತ್ರೆಯಲ್ಲಿ ೨೫೦ ಬೆಡ್ ವ್ಯವಸ್ಥೆ ಕಲ್ಪಿಸಿದ್ದು, ಐಸಿಯು ಹಾಗೂ ವೆಂಟಿಲೇಟರ್‌ನ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮಡಿಕೇರಿಯ ಜಿಲ್ಲಾ ತರಬೇತಿ ಕೇಂದ್ರ, ಕೂಡಿಗೆ ಹಾಗೂ ವೀರಾಜಪೇಟೆ ಮೂರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.
ಸೋಂಕು ಹರಡುವಿಕೆ ಹೆಚ್ಚಳ
ಕೊರೊನಾ ಸೋಂಕಿನ ಹರಡುವಿಕೆಯ ಪ್ರಮಾಣ ಅತ್ಯಂತ ವೇಗವಾಗಿರುವುದರ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ೧೮.೦೩.೨೦೨೦ಕ್ಕೆ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅಂದಿಗಿAತ ಪ್ರಸ್ತುತ ಸನ್ನಿವೇಶದಲ್ಲಿ ಸೋಂಕಿನ ಹರಡುವಿಕೆ ವೇಗ ಪಡೆದುಕೊಂಡಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ೨೫ ರಿಂದ ೩೦ ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದು ಆತಂಕಕಾರಿ ವಿಚಾರವಾಗಿದೆ. ಈ ಹಿನ್ನೆಲೆ ಜನತೆ ಮಾಸ್ಕ್ ಧರಿಸುವುದರಲ್ಲಿ ನಿರ್ಲಕ್ಷö್ಯ ತೋರದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪೊಲೀಸ್ ಇಲಾಖೆ ಕೂಡ ಕಟ್ಟುನಿಟ್ಟಿನ ಕ್ರಮವಹಿಸುತ್ತಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಪೂರಕ ಬೆಂಬಲ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತೆಯನ್ನು ಕೈಗೊಂಡಿದೆ. ‘ಟೆಸ್ಟಿಂಗ್, ಟ್ರಾö್ಯಕಿಂಗ್, ಟ್ರಿಟ್ಮೆಂಟ್’ ಮಾನದಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ. ಅದಲ್ಲದೆ ಬೆಂಗಳೂರಿನಲ್ಲಿ ಮೃತಪಟ್ಟ ಕೊಡಗು ಮೂಲದ ವ್ಯಕ್ತಿಯ ಅಂತ್ಯಸAಸ್ಕಾರದಲ್ಲಿ ಭಾಗವಹಿಸಿದ್ದ ೨೫ ಮಂದಿಗೆ
ಸೋಂಕು ತಟ್ಟಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಸೋಂಕು ವೇಗವಾಗಿ ಹರಡುತ್ತಿದೆ. ಮುನ್ನೆಚ್ಚರಿಕೆ ಅಗತ್ಯ ಎಂದರು. (ಮೊದಲ ಪುಟದಿಂದ) ಜಿಲ್ಲೆಯಲ್ಲಿ ಅಗತ್ಯ ಔಷಧಿ, ಚುಚ್ಚುಮದ್ದು, ಮಾಸ್ಕ್, ಸ್ಯಾನಿಟೈಸರ್ ಇದೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
೭೨ ಹೊಸ ಕೊರೊನಾ ಪ್ರಕರಣ
ಜಿಲ್ಲೆಯಲ್ಲಿ ತಾ. ೧೫ ರಂದು ೭೨ ಹೊಸ ಕೋವಿಡ್-೧೯ ಪ್ರಕರಣ ದೃಢಪಟ್ಟಿದೆ. ೬೨ ಆರ್‌ಟಿಪಿಸಿಆರ್ ಮತ್ತು ೧೦ ಪ್ರಕರಣ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೧೨, ಸೋಮವಾರಪೇಟೆ ತಾಲೂಕಿನಲ್ಲಿ ೨೭, ವೀರಾಜಪೇಟೆ ತಾಲೂಕಿನಲ್ಲಿ ೩೩ ಹೊಸ ಕೋವಿಡ್-೧೯ ಪ್ರಕರಣ ಕಂಡುಬAದಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೬೭೨೧ ಆಗಿದ್ದು, ೬೪೦೦ ಮಂದಿ ಗುಣಮುಖರಾಗಿದ್ದಾರೆ. ೨೩೮ ಸಕ್ರಿಯ ಪ್ರಕರಣಗಳಿದ್ದು, ೮೩ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೧೪೯ ಆಗಿದೆ. ೨೬ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ೧೫೦ ಆಕ್ಸಿಜೆನ್ ಬೆಡ್, ೩೨ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಾಸಿಟಿವ್ ಶೇ ೧.೬೯ ಪ್ರಮಾಣದಲ್ಲಿದ್ದು, ಗುಣಮುಖಗೊಳ್ಳುತ್ತಿರುವ ಪ್ರಮಾಣ ೯೬.೨೫ ರಷ್ಟು ಇದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದರು.
ಅದಲ್ಲದೆ ನಿತ್ಯ ಸಾವಿರ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ೯ ಸಂಚಾರಿ ತಂಡ ಕೋವಿಡ್ ಪರೀಕ್ಷೆ ನಡೆಸಲು ನಿಯೋಜಿಸಲಾಗಿದೆ. ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಆರೋಗ್ಯ ತಪಾಸಣೆ ತಂಡಕ್ಕೆ ಹೆಚ್ಚುವರಿ ಅಂಬ್ಯುಲೆನ್ಸ್ ಹಾಗೂ ಬಾಡಿಗೆ ಆದಾರದಲ್ಲಿ ವಾಹನಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ಕೋವಿಡ್ ಆಸ್ಪತ್ರೆ ಹಾಗೂ ಕೇರ್ ಸೆಂಟರ್ ಮೇಲುಸ್ತುವಾರಿ ನುರಿತ ತಜ್ಞರ ಸಮಿತಿಗೆ ವಹಿಸಲಾಗಿದೆ. ೫೬ ಬೆಡ್‌ಗಳ ತೀವ್ರ ನಿಗಾ ಘಟಕ ಕಾರ್ಯನಿರ್ವಹಿಸುತ್ತಿದೆ. ಐಸಿಯುನಲ್ಲಿರುವ ನಾಲ್ಕು
ಕೊರೊನಾ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದರು.
೬೦,೬೩೨ ಮಂದಿಗೆ ಲಸಿಕೆ
ಕೊರೊನಾ ವಾರಿರ‍್ಸ್, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು ೬೦,೬೩೨ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಚಾರುಲತಾ ಸೋಮಲ್ ತಿಳಿಸಿದರು.
೧,೬೫,೨೯೨ ಗುರಿ ನೀಡಿದ್ದು, ಇದರಲ್ಲಿ ೬೦,೬೩೨ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಆರೋಗ್ಯ ಕಾರ್ಯಕರ್ತರಿಗೆ ೬೫೬೦ ಗುರಿಯ ಪೈಕಿ ೫೧೧೬, ಫ್ರಂಟ್ ಲೈನ್ ವಕರ‍್ಸ್ ೩೧೨೬ ಗುರಿ ಪೈಕಿ ೨೩೧೦, ೪೫ ರಿಂದ ೫೯ ವಯೋಮಾನದವರಿಗೆ ೧೦೫೪೦೮ ಗುರಿಯ ಪೈಕಿ ೧೯೧೧೯, ೬೦ ವರ್ಷ ಮೇಲ್ಪಟ್ಟವರ ೫೦೧೯೮ ಗುರಿ ಪೈಕಿ ೩೪೦೮೭ ಗುರಿ ಸಾಧನೆ ಮಾಡಲಾಗಿದೆ.
ಚೆಕ್‌ಪೋಸ್ಟ್ಗಳಲ್ಲಿ ನಿಗಾವಹಿಸಲಾಗಿದೆ. ಕೇರಳದಿಂದ ಪ್ರವೇಶಿಸುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಅಶ್ವಿನಿ ಆಸ್ಪತ್ರೆಯಲ್ಲಿ ಕೊರೊನಾ ನಿಯಮವನ್ನು ಆರೋಗ್ಯ ಕಾರ್ಯಕರ್ತರು ಪಾಲಿಸುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ ಎಂದರು.
ಗೋಷ್ಠಿಯಲ್ಲಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ಕಾರ್ಯಪ್ಪ, ಅಧೀಕ್ಷಕ ಡಾ. ಎ.ಜೆ ಲೋಕೇಶ್, ಕಮ್ಯುನಿಟ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಇದ್ದರು.