ಹೆಬ್ಬಾಲೆ: ಹೆಬ್ಬಾಲೆ ಕನಕ ಬ್ಲಾಕ್ ಬಡಾವಣೆಯ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಯಲ್ಲಿ ಹೆಚ್ಚು ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನಕ ಬ್ಲಾಕ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಆರ್. ರಕ್ಷಿತಾ, ಅಕ್ಷತಾ, ಹೆಚ್.ಟಿ. ಚಿತ್ರಾ ಹಾಗೂ ಹೆಚ್.ಜಿ. ಪ್ರೀತು ಅವರಿಗೆ ಸಮಿತಿ ಸಂಚಾಲಕ ಕುಮಾರ್ ಅಪ್ಪಣ್ಣ ಅವರು ಪ್ರೋತ್ಸಾಹ ಧನದೊಂದಿಗೆ ಅಂಬೇಡ್ಕರ್ ಪುಸ್ತಕಗಳನ್ನು ನೀಡಿ ಗೌರವಿಸಿದರು.
ಸಮಿತಿ ಸಹ ಕಾರ್ಯದರ್ಶಿ ಕೆ. ಸೂರಜ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಮುಖಂಡರಾದ ಹೆಚ್.ಎಂ. ಶ್ರೀನಿವಾಸ್, ಸಂತೋಷ್, ತ್ಯಾಗರಾಜ್, ಸುಭಾಷ್, ತ್ರಿನೇಶ, ಅನುಸೂಯ ಉಪಸ್ಥಿತರಿದ್ದರು.ಮೊರಾರ್ಜಿ ಶಾಲೆಯಲ್ಲಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆಲೂರು-ಸಿದ್ದಾಪುರ ಇಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದದವರು ಸೇರಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಶಾಲಾ ಪ್ರಾಂಶುಪಾಲೆ ಭಾರತಿ ಕೆ.ಆರ್. ಉದ್ಘಾಟಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಲೋಕ್ ಮಾತನಾಡಿದರು. ಕಾರ್ಯಕ್ರಮವನ್ನು ಗಣಕಯಂತ್ರ ಶಿಕ್ಷಕಿ ಅಮೃತ ಪ್ರಾರ್ಥಿಸಿದರು ಹಾಗೂ ಆಂಗ್ಲ ಭಾಷಾ ಶಿಕ್ಷಕ ಸತೀಶ್ ವಂದಿಸಿದರು. ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ: ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಜಯಂತಿಯನ್ನು ಶ್ರೀಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ವಸ್ತç ವಿತರಣೆ ಮಾಡುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಅಂತಿಮ, ಸಮಾನತೆ ಮತ್ತು ಸಹೋದರತೆ ಅಂಬೇಡ್ಕರ್ ಅವರ ಆಶಯವಾಗಿದ್ದು. ಅದನ್ನು ಸಾಧಿಸುವ ಮೂಲಕ ದೇಶದ ಬದಲಾವಣೆ ಸಾಧ್ಯವೆಂದು ಹೇಳುವುದರೊಂದಿಗೆ ಹಿರಿಯರ ಯೋಗಕ್ಷೇಮ ವಿಚಾರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಸಂ. ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿದರು. ಅತಿಥಿಯಾಗಿ ಪಾಲ್ಗೊಂಡಿದ್ದ ದ.ಸಂ. ಸಮಿತಿಯ ತಾಲೂಕು ಸಂಚಾಲಕ ಎ.ಪಿ. ದೀಪಕ್, ಪತ್ರಕರ್ತ ರಂಜಿತ್ ಕವಲಪಾರ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ದ.ಸಂ. ಸಮಿತಿಯ ನಗರ ಸಂಚಾಲಕ ಸಿ.ಪಿ ಸಿದ್ದೇಶ್ವರ ಹಾಗೂ ದಲಿತ ವಿದ್ಯಾರ್ಥಿ ಸಂಘದ ಸದಸ್ಯೆ ರಂಜಿತ ಉಪಸ್ಥಿತರಿದ್ದರು.ಪ್ರಜಾ ಪರಿವರ್ತನಾ ವೇದಿಕೆಯಿಂದ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆಯ ಕನಸ್ಸನ್ನು ಸಹಕಾರಗೊಳಿಸಲು ಪ್ರತಿಯೊಬ್ಬರು ಪಣತೊಡಬೇಕೆಂದು ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಕರೆ ನೀಡಿದರು.
ಕೊಡಗು ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ಸುಂಟಿಕೊಪ್ಪದ ಜಿಲ್ಲಾ ಕಚೇರಿಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಬಿ.ಎ. ಗಣೇಶ್, ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ, ತಾಲೂಕು ಅಧ್ಯಕ್ಷ ಶಿವಪ್ಪ, ಸಂಘಟನಾ ಕಾರ್ಯದರ್ಶಿ ಜಗದೀಶ್, ಖಜಾಂಚಿ ಜಿ. ರಾಮ, ಹೋಬಳಿ ಅಧ್ಯಕ್ಷ ಮುತ್ತ ಹಾಜರಿದ್ದರು. ಖಜಾಂಚಿ ಹೆಚ್.ಟಿ. ಬೋಜ ಸ್ವಾಗತಿಸಿ, ನಿರೂಪಿಸಿದರು.ನೆಲ್ಲಿಹುದಿಕೇರಿ: ನೆಲ್ಲಿಹುದಿಕೇರಿಯ ಕೆಪಿಎಸ್‌ನ ಕಾಲೇಜು ವಿಭಾಗದಲ್ಲಿ ಅಂಬೇಡ್ಕರ್ ಜಯಂತಿಯನ್ನು ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಿಸಲಾಯಿತು.
ಕಾಲೇಜಿನ ವಾಣಿಜ್ಯಶಾಸ್ತç ಉಪನ್ಯಾಸಕ ಇಸ್ಮಾಯಿಲ್ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಸಮಾಜಶಾಸ್ತç ಉಪನ್ಯಾಸಕ ಧನಂಜಯಕುಮಾರ್, ಪ್ರಾಂಶುಪಾಲ ಅಂತೋಣಿ ವಿವಿಯನ್ ಆಲ್ಲರಿಸ್ ಅಂಬೇಡ್ಕರ್ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದರು. ವಿದ್ಯಾರ್ಥಿಗಳಾದ ರೀನಾ ಮತ್ತು ತೇಜಾ ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು ಮಾತನಾಡಿದರು. ಉಪನ್ಯಾಸಕರಾದ ಜಸ್ತಿನ್ ಕೊರೆಯ, ಲೋಕೇಶ್ ಪ್ರೌಢಶಾಲಾ ಶಿಕ್ಷಕರಾದ ಅನಿಲ್‌ಕುಮಾರ್, ಮಂಜುಳಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರೀನಾ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಧನ್ಯ ಸ್ವಾಗತಿಸಿದರು.ಕುಂಬಳಗೇರಿ ಉಕ್ಕುಡ: ಕುಂಬಳಗೇರಿ ಉಕ್ಕುಡದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸ ಲಾಯಿತು. ಕುಂಬಳಗೇರಿ ಉಕ್ಕುಡದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಡಾ. ಅಂಬೇಡ್ಕರ್ ಅವರ ಜೀವನದ ಆದರ್ಶಗಳು ಇಂದಿಗೂ ಮಾದರಿ ಎಂದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಮೈಸೂರು ಬಿವಿಎಸ್ ಸಂಪನ್ಮೂಲನ ವ್ಯಕ್ತಿ ಜಯರಾಂ ಅವರು ಡಾ. ಅಂಬೇಡ್ಕರ್ ಅವರು ಸಾಗಿದ ಬಂದ ಹಾದಿ ಮತ್ತು ಸಂವಿಧಾನದ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಠಾಣಾಧಿಕಾರಿ ಅಂತಿಮ ಗೌಡ, ಕುಂಬಳಗೇರಿ ಉಕ್ಕುಡದ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಬಿ. ಕೃಷ್ಣಪ್ಪ, ಪ್ರಕೃತಿ ಮಹಿಳಾ ಸಂಘದ ಅಧ್ಯಕ್ಷೆ ಹೆಚ್.ಪಿ. ಕಮಲಾಕ್ಷಿ ಉಪಸ್ಥಿತರಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಬಿ.ಎಸ್. ದರ್ಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ವರ್ಣರಂಜಿತವಾಗಿ ನಡೆಯಿತು.ಮಾನವತಾ ಯುವಕ ಸಂಘ: ಸೋಮವಾರಪೇಟೆ ಸಮೀಪದ ಬೆಟ್ಟದಳ್ಳಿ ಗ್ರಾಮದ ಮಾನವತಾ ಯುವಕ ಸಂಘ ಮತ್ತು ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ನಂದೀಶ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಈ. ಜಯೇಂದ್ರ, ಕಾರ್ಯದರ್ಶಿ ಜಗದೀಶ್, ಪದಾಧಿಕಾರಿಗಳಾದ ಬಿ.ಆರ್. ಪುನಿತ್, ಬಿ.ಎಂ. ದಿನೇಶ್, ಧರ್ಮೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಭಾರತೀ ವಿದ್ಯಾಸಂಸ್ಥೆ: ಶನಿವಾರಸಂತೆಯ ಭಾರತೀ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತç ಉಪನ್ಯಾಸಕ ಚಂದ್ರಶೇಖರ್ ಮೂರ್ತಿ, ಸೋಮಶೇಖರ್ ಮಾತನಾಡಿದರು.
ಭಾರತೀ ವಿದ್ಯಾಸಂಸ್ಥೆಯ ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಮಹ್ಮದ್ ಪಾಷಾ, ಪ್ರಾಂಶುಪಾಲರುಗಳಾದ ದಯಾನಂದ, ಅಶೋಕ್, ನರಸಿಂಹಮೂರ್ತಿ, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ನೌಕರ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕಿ ಹೆಚ್.ಎನ್. ಮಂಗಳಾ ಸ್ವಾಗತಿಸಿ, ಶಿಕ್ಷಕಿ ಭವಾನಿ ನಿರೂಪಿಸಿ, ಶಿಕ್ಷಕ ಗೋಪಾಲ ವಂದಿಸಿದರು.ಸAತ ಮೈಕಲರ ಶಾಲೆ: ಸಂತ ಮೈಕಲರ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಿಬ್ಬಂದಿ ವರ್ಗದಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಆರಂಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪ್ರಾಥಮಿಕ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರತಿಮಾ ಅವರು ಮಾಲಾರ್ಪಣೆ ಮಾಡಿದರು.
ಅಂಬೇಡ್ಕರ್ ವ್ಯಕ್ತಿತ್ವದ ಬಗ್ಗೆ ಕಾಲೇಜು ಉಪನ್ಯಾಸಕಿ ವಿಲ್ಮ ಸವಿವರವಾಗಿ ಮಾಹಿತಿ ನೀಡಿದರು ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕರು, ಪ್ರೌಢಶಾಲಾ ಮುಖ್ಯ ಶಿಕ್ಷಕರು ಶಾಲೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ದೊಡ್ಡಕುಂದ: ಕೊಡ್ಲಿಪೇಟೆ ವ್ಯಾಪ್ತಿಯ ದೊಡ್ಡಕುಂದ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಉಪವಲಯ ಅರಣ್ಯಾಧಿಕಾರಿ ಗೋವಿಂದರಾಜ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ಹನೀಫ್, ದಾಕ್ಷಾಯಿಣಿ, ಪ್ರಮುಖರಾದ ಡಿ.ಆರ್. ವೇದಕುಮಾರ್, ಜವರೇಗೌಡ, ಜನಾರ್ಧನ್, ಪಿ.ಡಿ.ಓ. ಹರೀಶ್, ಸಂಘದ ಪದಾಧಿಕಾರಿಗಳಾದ ದರ್ಶನ, ಜಯಂತ್, ಪ್ರಮೋದ್, ಕೀರ್ತಿ, ನವೀನ್, ಪವನ್, ಕುಮಾರ್ ಹಾಜರಿದ್ದರು.ಸುಂಟಿಕೊಪ್ಪ: ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಸಾಮಾಜಿಕ ನ್ಯಾಯ ಸಂವಿಧಾನಬದ್ಧ ಹಕ್ಕನ್ನು ದೊರಕಿಸಿಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದೇಶ ಕಂಡ ಅತ್ಯುತ್ತಮ ರಾಷ್ಟç ನಾಯಕರು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಗರಗಂದೂರು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ೧ ವರ್ಗದ ನಾಯಕರಲ್ಲ ದೇಶದ ಎಲ್ಲಾ ವರ್ಗದವರಿಗೆ ಸಮಾನ ಹಕ್ಕನ್ನು ದೊರಕಿಸಿಕೊಡುವಲ್ಲಿ ಅವರ ಪಾತ್ರ ಮಹತ್ವದಾಗಿತ್ತು ಎಂದೂ ಬಣ್ಣಿಸಿದರು.
ಗರಗಂದೂರು ಗ್ರಾಮದ ಗೌರವ ಅಧ್ಯಕ್ಷ ಜಿ.ಈ. ದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಪದ್ಮನಾಭ, ಗ್ರಾ.ಪಂ. ಉಪಾಧ್ಯಕ್ಷ ಎ.ಎ. ಬೋಜಮ್ಮ, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್, ಗ್ರಾ.ಪಂ. ಸದಸ್ಯರುಗಳಾದ ಉಷಾ ಟಿ.ಪಿ., ಮುಸ್ತಾಫ ಎಂ.ಎ., ಅಬ್ದುಲ್ ಸಲೀಂ, ರಮೇಶ್ ಕೆ.ಕೆ., ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಜಿ. ಸತೀಶ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕೆ.ಕೆ. ರಮೇಶ ಸ್ವಾಗತಿಸಿ, ವಂದಿಸಿದರು.
ಶನಿವಾರಸಂತೆ: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಕಚೇರಿಯ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರುಗಳಾದ ನಾರಾಯಣ ಸ್ವಾಮಿ, ಎನ್.ಕೆ. ಅಪ್ಪಸ್ವಾಮಿ, ಜಿ.ಬಿ. ಪರಮೇಶ್, ಸದಸ್ಯರುಗಳಾದ ಜಿ.ಪಿ. ಪುಟ್ಟಪ್ಪ, ಅಶೋಕ್, ಎಸ್.ಜಿ. ನರೇಶಚಂದ್ರ, ಟಿ.ಆರ್. ಕೇಶವಮೂರ್ತಿ, ಎಂ.ಆರ್. ಮಲ್ಲೇಶ್ ಉಪಸ್ಥಿತರಿದ್ದರು. ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಜಿ.ಪಿ. ಪುಟ್ಟಪ್ಪ ವಂದಿಸಿದರು.ಶನಿವಾರಸAತೆ: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯಲ್ಲಿ ದಲಿತ ಸಂಘಟನೆಗಳ ವತಿಯಿಂದ ಡಾ. ಅಂಬೇಡ್ಕರ್ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರು, ಪಿ.ಡಿ.ಓ., ದಲಿತ ಸಂಘಟನೆ ಮುಖಂಡರು ಹಾಜರಿದ್ದರು.ಮಡಿಕೇರಿ: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅಶೋಕಪುರದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭ ಉದ್ಘಾಟನೆ ಮತ್ತು ಪುಷ್ಪ ನಮನವನ್ನು ನಂದಕುಮಾರ್, ಜಯರಾಂ, ಶ್ಯಾಂ ವೆಂಕಪ್ಪ, ಮುತ್ತಪ್ಪ, ನಾಗರಾಜು, ಅವೀನ್‌ಕುಮಾರ್, ರಮೇಶ್, ಸಂಘದ ಸದಸ್ಯರುಗಳು ಊರಿನ ಸದಸ್ಯರುಗಳು ನೆರವೇರಿಸಿದ್ದರು. ನಂತರ ಗಣಪತಿ ಸೇವಾ ಸಮಿತಿ ಮತ್ತು ಸಂತೋಷ್ ಯುವಕ ಸಂಘದ ವತಿಯಿಂದ ಕ್ರೀಡಾ ಚಟುವಟಿಕೆಯನ್ನು ನಡೆಸಲಾಗಿ ಸ್ಪರ್ಧಿಸಿದ ಎಲ್ಲರಿಗೂ ಬಹುಮಾನವನ್ನು ವಿತರಿಸಲಾಯಿತು.