ಶನಿವಾರಸಂತೆ, ಏ. ೧೫: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಆಡಳಿತ ಮಂಡಳಿ ಸಭೆ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಏಪ್ರಿಲ್ ತಿಂಗಳ ಜಮಾ ಖರ್ಚಿನ ಲೆಕ್ಕವನ್ನು ಸಭೆಗೆ ಮಂಡಿಸಿದರು.
ಮುಖ್ಯ ಅತಿಥಿಯಾಗಿ ಸಭೆಗೆ ಆಗಮಿಸಿದ್ದ ಭಾರತ ಸರಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿಯಲ್ಲಿ ಮೈಲೈಫ್ ಸ್ಟೆöÊಲ್ ಕಂಪೆನಿಯ ಆರೋಗ್ಯ ಅಧಿಕಾರಿಯಾದ ಹಸೀನಾ ಆಸೀಫ್ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಲ್ಯಾಪ್ ಟಾಪ್ ಮೂಲಕ ಸಂಪೂರ್ಣ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಕೆ.ಎನ್. ಕಾರ್ಯಪ್ಪ, ಎಸ್.ಜಿ. ನರೇಶ್ಚಂದ್ರ, ಟಿ.ಆರ್. ಕೇಶವಮೂರ್ತಿ, ಜಿ.ಪಿ. ಪುಟ್ಟಪ್ಪ ಸೇರಿದಂತೆ ಇನ್ನಿತರರು ಇದ್ದರು.