ಕಣಿವೆ, ಏ. ೧೫: ತಾಲೂಕು ಕೇಂದ್ರ ಕುಶಾಲನಗರದ ಸೆರಗಿನಲ್ಲಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಬಸವೇಶ್ವರ ಬಡಾವಣೆಯ ಕಣ್ಣೆದುರೆ ಕಾವೇರಿ ನದಿ ಹರಿಯುತ್ತಿದೆ. ಇನ್ನು ಹಾರಂಗಿ ಜಲಾಶಯ ಕೂಗಳತೆ ದೂರದಲ್ಲಿದೆ. ಹೀಗಿದ್ದರೂ ಕೂಡ ಈ ವಾಸಿಗಳಿಗೆ ಕುಡಿಯುವ ಶುದ್ಧ ನೀರನ್ನು ಹರಿಸುವಲ್ಲಿ ಸ್ಥಳೀಯ ಪಂಚಾಯಿತಿ ಆಡಳಿತ ಮಾತ್ರ ನಿರ್ಲಕ್ಷö್ಯ ವಹಿಸಿದೆ.

ಸ್ವಾಭಾವಿಕವಾಗಿ ಒಂದಷ್ಟು ಎತ್ತರ ಪ್ರದೇಶದಲ್ಲಿರುವ ಈ ಬಸವೇಶ್ವರ ಬಡಾವಣೆ ಐದು ನೂರು ಕಿಮೀ ನಷ್ಟು ಉದ್ದಗಲಕ್ಕೆ ಹರಡಿಕೊಂಡಿದ್ದು ಹೆಸರಿಗಷ್ಟೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಆದರೆ ಈ ಬಡಾವಣೆಯಲ್ಲಿ ಇಡೀ ಜಿಲ್ಲೆಯ ಮೂಲೆ ಮೂಲೆ ಗಳಲ್ಲಿನ ಮಂದಿ ನಿವೇಶನ ಖರೀದಿಸಿ, ಆ ನಿವೇಶನ ದೊಳ ಗೊಂದು ಅವರಿಚ್ಛೆ ಬಂದAತೆ ಅಂದ ಚೆಂದದ ಮನೆಗಳನ್ನು ಕಟ್ಟಿಕೊಂಡಿದ್ದಾರೆ.

ಆದರೆ ಈ ಬಡಾವಣೆಯ ವಾಸಿಗಳಿಗೆ ಕಾವೇರಿ ನೀರು ಹರಿಸದ ಕಾರಣ ಮನೆ ಮಾಲೀಕರು ಲಕ್ಷಾಂತರ ರೂಗಳನ್ನು ವ್ಯಯಿಸಿ ಕುಡಿಯುವ ನೀರಿಗೆ ಕೊಳವೆ ಬಾವಿ ಅಳವಡಿಸಿಕೊಂಡಿದ್ದಾರೆ.

ಆದರೆ ಈಗ ಏಪ್ರಿಲ್ ನಲ್ಲಿ ಧರೆಯನ್ನು ಸುಡುತ್ತಿರುವ ಭಯಾನಕ ಬಿಸಿಲ ಝಳಕ್ಕೆ ಅಂತರ್ಜಲ ಕೂಡ ಬತ್ತಿ ಹೋಗುತ್ತಿದೆ. ಹಾಗಾಗಿ ಕುಡಿಯುವ ನೀರಿಗೆ ಇಲ್ಲಿನ ಜನ ಹಾಹಾಕಾರ ಪಡುವಂತಾಗಿದೆ.

ಇನ್ನು ಕೆಲವು ನಿವಾಸಿಗಳು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡಿರುವ ಕುಡಿಯುವ ನೀರಿನ ಫಿಲ್ಟರ್ ಯೂನಿಟ್‌ಗಳು ಕೊಳವೆ ಬಾವಿಯಲ್ಲಿನ ಗಡಸು ನೀರಿಗೆ (ಹಾರ್ಡ್ ವಾಟರ್) ತುಕ್ಕು ಹಿಡಿಯುತ್ತಿವೆ ಎಂದು ಅಲ್ಲಿನ ನಿವಾಸಿಗಳು ಪತ್ರಿಕೆಯೊಂದಿಗೆ ದೂರಿದ್ದಾರೆ.

ಟ್ಯಾಂಕಿಗಿAತ ಎತ್ತರದ ಬಡಾವಣೆ :

ಈ ಬಸವೇಶ್ವರ ಬಡಾವಣೆಯ ಭೂಪ್ರದೇಶ ಜಲಮಂಡಳಿ ಕಚೇರಿ ಬಳಿ ಇರುವ ಕುಡಿವ ನೀರಿನ ಬೃಹತ್ ಎತ್ತರದ ಟ್ಯಾಂಕಿಗಿAತಲೂ ಎತ್ತರವಿರುವ ಪರಿಣಾಮ ಇಲ್ಲಿಂದ ಕುಡಿಯುವ ನೀರು ಪಂಪ್ ಆಗುತ್ತಿಲ್ಲ. ಹಾರಂಗಿ ಜಲಾಶಯದಿಂದ ನಾವು ಅಳವಡಿಸಿಕೊಂಡಿದ್ದಾರೆ.

ಆದರೆ ಈಗ ಏಪ್ರಿಲ್ ನಲ್ಲಿ ಧರೆಯನ್ನು ಸುಡುತ್ತಿರುವ ಭಯಾನಕ ಬಿಸಿಲ ಝಳಕ್ಕೆ ಅಂತರ್ಜಲ ಕೂಡ ಬತ್ತಿ ಹೋಗುತ್ತಿದೆ. ಹಾಗಾಗಿ ಕುಡಿಯುವ ನೀರಿಗೆ ಇಲ್ಲಿನ ಜನ ಹಾಹಾಕಾರ ಪಡುವಂತಾಗಿದೆ.

ಇನ್ನು ಕೆಲವು ನಿವಾಸಿಗಳು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡಿರುವ ಕುಡಿಯುವ ನೀರಿನ ಫಿಲ್ಟರ್ ಯೂನಿಟ್‌ಗಳು ಕೊಳವೆ ಬಾವಿಯಲ್ಲಿನ ಗಡಸು ನೀರಿಗೆ (ಹಾರ್ಡ್ ವಾಟರ್) ತುಕ್ಕು ಹಿಡಿಯುತ್ತಿವೆ ಎಂದು ಅಲ್ಲಿನ ನಿವಾಸಿಗಳು ಪತ್ರಿಕೆಯೊಂದಿಗೆ ದೂರಿದ್ದಾರೆ.

ಟ್ಯಾಂಕಿಗಿAತ ಎತ್ತರದ ಬಡಾವಣೆ :

ಈ ಬಸವೇಶ್ವರ ಬಡಾವಣೆಯ ಭೂಪ್ರದೇಶ ಜಲಮಂಡಳಿ ಕಚೇರಿ ಬಳಿ ಇರುವ ಕುಡಿವ ನೀರಿನ ಬೃಹತ್ ಎತ್ತರದ ಟ್ಯಾಂಕಿಗಿAತಲೂ ಎತ್ತರವಿರುವ ಪರಿಣಾಮ ಇಲ್ಲಿಂದ ಕುಡಿಯುವ ನೀರು ಪಂಪ್ ಆಗುತ್ತಿಲ್ಲ. ಹಾರಂಗಿ ಜಲಾಶಯದಿಂದ ನಾವು ಈಗಾಗಲೇ ಜಲ ಮಂಡಳಿಯಿAದ ಸಿದ್ಧಗೊಂಡಿರುವ ರೂ. ೮೦ ಕೋಟಿ ವೆಚ್ಚದ ಹಾರಂಗಿ ಕುಡಿಯುವ ನೀರಿನ ಯೋಜನೆಯ ಸಾಕಾರಕ್ಕೂ ಕೂಡ ಮುಂದಾಗಬೇಕೆAದು ಈ ಭಾಗದ ನಿವಾಸಿಗಳ ಪರವಾಗಿ ಮುಳ್ಳುಸೋಗೆ ಪಂಚಾಯಿತಿ ಸದಸ್ಯ ಜಗದೀಶ್ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ವಿ.ಎಸ್. ಆನಂದಕುಮಾರ್ ಆಗ್ರಹಿಸಿದ್ದಾರೆ.

ರಸ್ತೆ - ಚರಂಡಿಯೂ ಇಲ್ಲ :

ಬಸವೇಶ್ವರ ಬಡಾವಣೆಗೆ ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲ. ಸರಿಯಾದ ರಸ್ತೆ ಹಾಗೂ ಚರಂಡಿಯ ವ್ಯವಸ್ಥೆಯೂ ಇಲ್ಲ. ಈಗ ಬಡಾವಣೆಯಲ್ಲಿರುವ ಬಹುತೇಕ ರಸ್ತೆಗಳಲ್ಲಿ ಕಲ್ಲು ಗುಂಡಿಗಳು ತುಂಬಿ ವಾಹನಗಳ ಸುಗಮ ಸಂಚಾರಕ್ಕೆ ದುರ್ಗಮವಾದ ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವೆಡೆಗಳಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕಾಡು ಗಿಡಗಳು ಬೆಳೆದು ಪೊದೆಯಾಗಿದ್ದು, ಕಳ್ಳರ ಖದೀಮರ ಚಟುವಟಿಕೆಗಳು ನಡೆಯುವ ಸಾಧ್ಯತೆ ನಿಚ್ಚಳವಾಗಿ ರುವುದರಿಂದ ಪಂಚಾಯಿತಿ ಆಡಳಿತ ಖಾಲಿ ನಿವೇಶನಗಳ ಸುಸ್ಥಿತಿಯತ್ತ ಗಮನ ಹರಿಸಬೇಕಿದೆ ಎಂದು ಪಾಣತ್ತಲೆ ಗಿರೀಶ್ ಹಾಗೂ ಕಲ್ಲೂರು ಸತೀಶ್ ಒತ್ತಾಯಿಸಿದ್ದಾರೆ.