ವೀರಾಜಪೇಟೆ, ಏ. ೧೫: ವಿಶು ಆಚರಣೆಯ ಪ್ರಯುಕ್ತ ಮಾವಿನ ಎಲೆ ಕುಯ್ಯಲು ಮರವೇರಿದ ಯುವಕ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ದುರ್ಘಟನೆ ವೀರಾಜಪೇಟೆ ಸಮೀಪದ ತೋಮರ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು ನಿವಾಸಿ ತಮ್ಮಿ ಎಂಬುವವರ ಪುತ್ರ ಚರಣ್ (೨೯) ಮೃತಪಟ್ಟ ಯುವಕ.
ವಿಶು ಹಬ್ಬಕ್ಕೆಂದು ತೋಮರ ಗ್ರಾಮದ ತನ್ನ ಅತ್ತೆಯ ಮನೆಗೆ ಆಗಮಿಸಿದ್ದು, ಬೆಳಿಗ್ಗೆ ೬.೩೦ಕ್ಕೆ ಯುವಕನ ಅತ್ತೆಯ ಮನೆಯ ಬಾಗಿಲಿಗೆ ತೋರಣ ಕಟ್ಟಲು ಮಾವಿನ ಎಲೆ ತರಲು ತಿಳಿಸಿದ್ದಾರೆ. ಯುವಕ ಮನೆಯ ಸನಿಹದಲ್ಲಿರುವ ಮಾವಿನ ಮರವನ್ನು ಹತ್ತಿದ್ದಾನೆ. ಮಾವಿನ ಎಲೆಗಳನ್ನು ಕುಯ್ಯುವ ಸಂದÀರ್ಭ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾನೆ ಪರಿಣಾಮ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ರಕ್ತಸ್ರಾವವಾಗಿದೆ. ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಯುವಕ ಕೊನೆಯುಸಿರುಳೆದ್ದಿದ್ದಾನೆ.
ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.