ಭಾಗಮಂಡಲ, ಏ. ೧೬: ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದ ಮಂದತಿರಿಕೆ ಭಗವತಿ ದೇವರ ಉತ್ಸವವು ಮೂರು ದಿನಗಳ ಕಾಲ ಜರುಗಿತು. ತಾ. ೯ ರಂದು ತಕ್ಕರ ಮನೆಯಿಂದ ಭಂಡಾರ ತರುವುದರೊಂದಿಗೆ ಉತ್ಸವ ಆರಂಭಗೊAಡಿತು. ತಾ. ೧೦ ರಂದು ಬೆಳಿಗ್ಗೆ ಮೂರು ಸುತ್ತಿನ ನೃತ್ಯಬಲಿ ಹಾಗೂ ಸಂಜೆ ೫ ಸುತ್ತಿನ ನೃತ್ಯಬಲಿ ಜರುಗಿತು.

ತಾ. ೧೧ ರಂದು ನಡೆದ ಪಟ್ಟಣ ಹಬ್ಬದಲ್ಲಿ ಬೇಡುಹಬ್ಬ ಹಾಗೂ ನೃತ್ಯಬಲಿ ಜರುಗಿತು. ತಾ. ೧೨ ರಂದು ೧೨ ಸುತ್ತಿನ ನೃತ್ಯಬಲಿ ಮಹಾಪೂಜೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.