ಮಡಿಕೇರಿ, ಏ. ೧೫; ಮಡಿಕೇರಿ ನಗರಸಭೆಗೆ ವಾರ್ಡ್ ಮೀಸಲಾತಿಯೊಂದಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಹೋದರೆ ಇತ್ತ ‘ಕೌನ್ಸಿಲರ್’ಗಳಾಗಲು ಪಕ್ಷೇತರರು, ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆದು ಬಂಡಾಯ ಅಭ್ಯರ್ಥಿಗಳು ಕೂಡ ಸನ್ನದ್ಧರಾದರು. ಈ ನಡುವೆ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವದು, ಬಂಡಾಯಗಾರರನ್ನು ಶಮನಗೊಳಿಸುವದು ಆಯಾ ಪಕ್ಷಗಳ ನಾಯಕರುಗಳಿಗೆ ಒಂದು ದೊಡ್ಡ ಸವಾಲಾಗಿಯೇ ಪರಿಣಮಿಸಿತ್ತು. ಇವೆಲ್ಲದರ ನಡುವೆ ಪಕ್ಷದ ನಾಯಕರುಗಳು ಆಯಾ ವಾರ್ಡ್ಗಳಿಗೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕೃತವಾಗಿ ಕಣಕ್ಕಿಳಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಕಸರತ್ತಿನ ಬಗ್ಗೆ ಆಯಾ ಪಕ್ಷದ ನಾಯಕರುಗಳು ತಮ್ಮ ಅಭಿಪ್ರಾಯವನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡಿದ್ದಾರೆ.

ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ

ಅಭ್ಯರ್ಥಿಗಳ ಆಯ್ಕೆ ಸಂಬAಧ ಬೂತ್ ಮಟ್ಟದಿಂದ ವರದಿ ಪಡೆದು ಯಾರು ಉತ್ತಮರು ಎಂದು ಚರ್ಚೆ ಮಾಡಿ, ಎದುರಾಳಿ ಅಭ್ಯರ್ಥಿಯನ್ನು ಮಣಿಸಲು ಯಾರು ಸಮರ್ಥರು ಎಂಬ ಬಗ್ಗೆ ಅಳೆದು ತೂಗಿ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು, ಕೆಲವು ಹಿರಿಯ ಸದಸ್ಯರುಗಳು ಸ್ಪರ್ಧೆಯಿಂದ ಹಿಂದೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆಯ್ಕೆಯಲ್ಲಿ ಗೊಂದಲಗಳಾಗಿಲ್ಲ; ಪಕ್ಷದಲ್ಲಿ ಟಿಕೆಟ್ ಕೇಳುವ ಅರ್ಹತೆ ಎಲ್ಲರಿಗೂ ಇದೆ, ಹಿಂದಿನಿAದಲೂ ನಡೆದು ಬಂದಿದೆ. ಎಲ್ಲರೊಂದಿಗೂ ಮಾತುಕತೆ ಮೂಲಕ ಬಗೆಹರಿಸಿಕೊಂಡು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುವದು.

ರಾಬಿನ್ ದೇವಯ್ಯ, ಅಧ್ಯಕ್ಷರು, ಜಿಲ್ಲಾ ಬಿಜೆಪಿ.

ತೃಪ್ತಿಕರ ಆಯ್ಕೆಯಾಗಿದೆ

ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಕ್ಷದ ಹಿರಿಯರು, ಮಾಜಿ ಸಚಿವರು, ಶಾಸಕರು, ನಾಯಕರುಗಳು ಸೇರಿ ಚರ್ಚಿಸಿ ಪಕ್ಷದ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಆಯ್ಕೆ ಸಮಿತಿಗೆ ಬರುತ್ತದೆ. ಮಾಜಿ ಸಚಿವ ಚೆಲುವರಾಯ ಸ್ವಾಮಿ ಸಮಿತಿಯ ಅಧ್ಯಕ್ಷರಾಗಿದ್ದು, ತಾನೂ ಕೂಡ ಸಮಿತಿಯ ಸಂಯೋಜಕನಾಗಿದ್ದೇನೆ. ಬೂತ್ ಮಟ್ಟದಿಂದ ಪರಿಗಣಿಸಿ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಗಮನ ಹರಿಸಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಒಂದೊAದು ವಾರ್ಡ್ಗಳಿಂದ ೬ರಿಂದ ೭ ಮಂದಿ ಆಕಾಂಕ್ಷಿಗಳಿದ್ದರು. ಆದರೆ, ಓರ್ವರಿಗೆ ಮಾತ್ರ ಅವಕಾಶ ಲಭಿಸಲಿದೆ. ಇನ್ನುಳಿದ ಆಕಾಂಕ್ಷಿಗಳಿಗೆ ನೋವಾಗುವದು ಸಹಜ, ಮಾತುಕತೆ ಮೂಲಕ ಎಲ್ಲವೂ ಸರಿಯಾಗಲಿದೆ. ಉತ್ತಮ ಹಾಗೂ ತೃಪ್ತಿಕರ ಆಯ್ಕೆಯಾಗಿದೆ.

ಕೆ.ಕೆ.ಮಂಜುನಾಥ್‌ಕುಮಾರ್,

ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್.

ಪ್ರಜ್ಞಾವAತ ಅಭ್ಯರ್ಥಿಗಳಿಗೆ ಅವಕಾಶ

ನಮ್ಮ ಪಕ್ಷದಲ್ಲಿ ಕೆಲವೊಂದು ವಾರ್ಡ್ಗಳಲ್ಲಿ ೪ರಿಂದ ೫ಮಂದಿ ಆಕಾಂಕ್ಷಿಗಳಿದ್ದರು. ಅವರುಗಳನ್ನೇ ಚರ್ಚೆಗೆ ಬಿಟ್ಟು ಅವರುಗಳಲ್ಲೇ ಹೊಂದಾಣಿಕೆ ಮಾಡಿಕೊಂಡು ಆಯ್ಕೆ ಮಾಡಲಾಗಿದೆ. ಮತ್ತೊಂದು ವಾರ್ಡ್ನಲ್ಲಿ ಪೈಪೋಟಿ ಇದ್ದುದರಿಂದ ಹೈಕಮಾಂಡ್‌ಗೆ ಕಳುಹಿಸಿ ಅಲ್ಲಿಂದ ಶಮನಗೊಳಿಸಲಾಗಿದೆ. ನಮ್ಮಲ್ಲಿ ಯಾವದೇ ಗೊಂದಲಗಳಿಲ್ಲ, ಬೇರೆ ಪಕ್ಷಗಳಲ್ಲಿರುವಂತೆ ಯಾವದೇ ಬಂಡಾಯವಿಲ್ಲ. ಕಾಂಗ್ರೆಸ್ ಪಕ್ಷದಿಂದ ಬಂದ ಹಿರಿಯ ಸದಸ್ಯರೋರ್ವರಿಗೂ ಅವಕಾಶ ನೀಡಲಾಗಿದೆ. ಎಲ್ಲ ಸಮುದಾಯದವರಿಗೂ ಸಮಾನಾವಕಾಶ ನೀಡಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾವಂತರು, ಪ್ರಜ್ಞಾವಂತರಿಗೆ ಅವಕಾಶ ನೀಡಿದ್ದೇವೆ.

ಕೆ.ಎಂ.ಗಣೇಶ್. ಅಧ್ಯಕ್ಷರು, ಜಿಲ್ಲಾ ಜೆಡಿಎಸ್.

ರಾಜ್ಯ ನಾಯಕರಿಂದ ಆಯ್ಕೆ

ತಳಮಟ್ಟದಿಂದ ಅಭ್ಯರ್ಥಿಗಳನ್ನು ಗುರುತಿಸಿ ಚರ್ಚೆ ಮಾಡಿ ೫ರಿಂದ ೬ ಮಂದಿಯ ಹೆಸರುಗಳನ್ನು ಗುರುತಿಸಿ ಆ ಪೈಕಿ ಮೂವರ ಹೆಸರುಗಳನ್ನು ರಾಜ್ಯ ನಾಯಕರುಗಳಿಗೆ ಕಳುಹಿಸಿಕೊಡಲಾಗಿತ್ತು. ರಾಜ್ಯದಿಂದ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡಲಾಗಿದೆ. ನಮ್ಮಲ್ಲಿ ಯಾವದೇ ಗೊಂದಲಗಳಿಲ್ಲ.

ಎA.ಎ. ಮನ್ಸೂರ್, ಅಧ್ಯಕ್ಷರು, ಜಿಲ್ಲಾ ಎಸ್‌ಡಿಪಿಐ