ಸುAಟಿಕೊಪ್ಪ,ಏ.೧೫: ರಾಷ್ಟಿçÃಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಆಕಸ್ಮಿಕವಾಗಿ ಎದುರಿನಿಂದ ಬರುತ್ತಿದ್ದ ಲಾರಿಯ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ೨ ವಾಹನಗಳು ಸುಟ್ಟು ಕರಕಲಾಗಿದ್ದು ವಾಹನದಲ್ಲಿದ್ದವರು ಪವಾಡ ಸದೃಶವಾಗಿ ಬದುಕುಳಿದ ಘಟನೆ ಸಂಭವಿಸಿದೆ.

ಮೈಸೂರಿನಿಂದ ಟಯರ್ ತುಂಬಿಕೊAಡು ಮಂಗಳೂರಿನ ಬಂದರಿಗೆ ಲಾರಿಗೆ (ಕೆಎ-೦೯-ಬಿ.೬೧೪೦) ಮಡಿಕೇರಿಯಿಂದ ಕುಶಾಲನಗರ ಕಡೆ ತೆರಳುತ್ತಿದ್ದ ನೂತನ ಮಾರುತಿ ಸುಜುಕಿ ಎಸ್‌ಕ್ರಾಸ್ ಕಾರು ಕೆದಕಲ್ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಲಾರಿಯ ಡೀಸೆಲ್ ಟ್ಯಾಂಕ್‌ಗೆ ಕಾರು ಡಿಕ್ಕಿಯಾದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ ಲಾರಿ ಚಾಲಕ ತಿಮ್ಮಯ್ಯ ಹಾಗೂ ಕಾರು ಚಾಲಕ ಚಿಟ್ಟಿಯಪ್ಪ ಹೇಗೊ ವಾಹನದಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.

ವಾÀಹನಗಳೆರಡು ಬೆಂಕಿಯ ಕೆನ್ನಾಲಿಗೆ ಸಿಲುಕಿ ಸುಟ್ಟು ಕರಕಲಾಗಿದೆ. ರಾತ್ರಿ ೧೧.೫ ರ ಸಂದರ್ಭ ಅವಘಡ ಸಂಭವಿಸಿದ್ದು ಕೆದಕಲ್ ನಿವಾಸಿಯೋರ್ವರು ನಿದ್ರೆಯಿಂದ ಎದ್ದು ಬಂದು ಸುಂಟಿಕೊಪ್ಪ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನೀತ್, ವೆಂಕಟರಮಣ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ೩ ಅಗ್ನಿ ಶಾಮಕ ವಾಹನಗಳು ೩ ತಾಸುಗಳ

(ಮೊದಲ ಪುಟದಿಂದ) ಕಾಲ ಕಾರ್ಯಾಚರಣೆ ನಡೆಸಿದರೂ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬಾರಲಿಲ್ಲ. ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಪೂರ್ಣ ೩ ಗಂಟೆಗೂ ಅಧಿಕ ಸಮಯ ಸಂಚಾರ ಸ್ಥಗಿತಗೊಂಡಿತ್ತು. ೪ ನೇ ಅಗ್ನಿ ಶಾಮಕ ವಾಹನ ಬರುತ್ತಿದ್ದಂತೆ ಅಗ್ನಿಯ ತೀವ್ರತೆ ನಿಯಂತ್ರಣಕ್ಕೆ ಬಂದಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಲಾರಿ ಚಾಲಕ ತಿಮ್ಮಯ್ಯ ನೀಡಿದ ದೂರಿನ ಮೇರೆ ಪ್ರಕರಣ ದಾಖಲಿಸಿದ ಪೊಲೀಸರು ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸುತ್ತಿದ್ದಾರೆ.