ಚೆಟ್ಟಳ್ಳಿ, ಏ. ೧೬: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಮಿಲನ್ಸ್ ಅಮ್ಮತ್ತಿ ಫುಟ್ಬಾಲ್ ಕ್ಲಬ್ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ಎರಡನೇ ದಿನದ ಪಂದ್ಯಾವಳಿಯಲ್ಲಿ ಆರು ತಂಡಗಳು ಗೆಲುವು ಸಾಧಿಸಿವೆ.
ಮೊದಲ ಪಂದ್ಯದಲ್ಲಿ ಯಂಗ್ ಇಂಡಿಯಾ ಪಾಲಿಬೆಟ್ಟ ತಂಡವನ್ನು ಹೆಚ್.ಎಫ್.ಸಿ ಹಳ್ಳಿಗಟ್ಟು ತಂಡ ೩-೦ ಗೋಲುಗಳ ಅಂತರದಿAದ ಸೋಲಿಸಿತು. ಎರಡನೇ ಪಂದ್ಯದಲ್ಲಿ ಕೆ.ಎಫ್.ಸಿ ಕುಶಾಲನಗರ ತಂಡವು ಆತಿಥೇಯ ಮಿಲನ್ಸ್ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಮೂರನೇ ಪಂದ್ಯವು ಬಿ.ವೈ.ಸಿ ಹಾಲುಗುಂದ ಹಾಗೂ ವೈಶ್ಣವಿ ಮರಗೋಡು ತಂಡಗಳ ನಡುವೆ ನಡೆಯಿತು.ವೈಷ್ಣವಿ ಮರಗೋಡು ತಂಡವು ೪-೦ ಗೋಲುಗಳ ಅಂತರದಿAದ ಭರ್ಜರಿ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ರೋಜಾರಿಯನ್ ಎಫ್.ಸಿ ಗೋಣಿಕೊಪ್ಪ ತಂಡ, ಬಲಿಷ್ಠ ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಗೆಲುವು ಸಾಧಿಸಿತು.
ಐದನೇ ಪಂದ್ಯವು ಯೂನಿವರ್ಸಲ್ ಎಫ್.ಸಿ ರಂಗಸಮುದ್ರ ಹಾಗೂ ಶೈನಿಬರ್ಡ್ ಪಾಲಿಬೆಟ್ಟ ತಂಡಗಳ ನಡುವೆ ನಡೆಯಿತು. ಶೈನಿಂಗ್ ಬರ್ಡ್ ತಂಡವು ೨-೧ ಗೋಲುಗಳ ಅಂತರದಿAದ ಗೆದ್ದಿತು. ಕೊನೆಯ ಪಂದ್ಯದಲ್ಲಿ ಚೌಡೇಶ್ವರಿ ಯೂತ್ ಕ್ಲಬ್ ಅಮ್ಮತ್ತಿ ತಂಡವು ೩-೦ ಗೋಲುಗಳ ಅಂತರದಿAದ ಎನ್.ವೈ.ಸಿ ಕೊಡಗರಹಳ್ಳಿ ತಂಡವನ್ನು ಮಣಿಸಿತು.