ಗೋಣಿಕೊಪ್ಪ ವರದಿ, ಏ. ೧೬ : ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಟೂರ್ನಿ ಬಲ್ಯಂಡ ಕ್ರಿಕೆಟ್ ಕಪ್‌ಗೆ ತಾ. ೧೭ರಂದು (ಇಂದು) ಚಾಲನೆ ದೊರೆಯಲಿದೆ. ಬಲ್ಯಂಡ ಕುಟುಂಬ ಟೂರ್ನಿ ಆಯೋಜಿಸಿದ್ದು, ಬೆಳಿಗ್ಗೆ ೯ ಗಂಟೆಗೆ ಟೂರ್ನಿ ಉದ್ಘಾಟನೆಗೊಳ್ಳಲಿದೆ. ೧೮ ತಂಡಗಳು ಸೆಣೆಸಾಡಲಿದ್ದು, ತಾ. ೧೮ರಂದು ಅಂತಿಮ ಹಣಾಹಣಿ ನಡೆಯಲಿದೆ.