೫ ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚರಿಸುವ ಸಾಧ್ಯತೆ - ಲಕ್ಷö್ಮಣ ಸವದಿ ವಿಶ್ವಾಸ
ಬೀದರ್, ಏ. ೧೫: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಸರ್ಕಾರ ರೂ. ೧೭೦ ಕೋಟಿವರೆಗೆ ನಷ್ಟ ಅನುಭವಿಸುತ್ತಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಹೇಳಿದ್ದಾರೆ. ಕರ್ತವ್ಯಕ್ಕೆ ಹಾಜರಾಗಲು ಹೆಚ್ಚಿನ ಸಂಖ್ಯೆಯ ನೌಕರರು ಮುಂದೆ ಬರುತ್ತಿದ್ದು, ಶುಕ್ರವಾರ ಬೆಳಗ್ಗೆಯಿಂದ ೫,೦೦೦ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕೆಲಸಕ್ಕೆ ಮರಳುವಂತೆ ನೌಕರರಿಗೆ ಸರ್ಕಾರ ಮತ್ತೊಮ್ಮೆ ಮನವಿ ಮಾಡುತ್ತಿದೆ. ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರ ಕಠಿಣ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದೆ. ಗುರುವಾರ ಬೆಳಿಗ್ಗೆ ಹೆಚ್ಚಿನ ನೌಕರರು ಕೆಲಸಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆಯಿಂದ ೨,೫೦೦ ಬಸ್‌ಗಳು ಸಂಚರಿಸುತ್ತಿವೆ. ಶುಕ್ರವಾರ ಬೆಳಗ್ಗೆಯಿಂದ ೫,೦೦೦ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸಿಗೆಗಳನ್ನು ಕಾಯ್ದಿರಿಸದ ಆಸ್ಪತ್ರೆಗಳು, ಸುಲಿಗೆ ಮಾಡುವ ಆ್ಯಂಬುಲೆನ್ಸ್ಗಳ ವಿರುದ್ಧ ಕ್ರಮ
ಬೆಂಗಳೂರು, ಏ. ೧೫: ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹಾಸಿಗೆಗಳನ್ನು ಕೊರೊನಾಗೆ ಮೀಸಲಿಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೂಡ ಹಾಸಿಗೆ ಮೀಸಲಿಡದಿದ್ದರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಸಂಬAಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ೪೦೦ಕ್ಕೂ ಹೆಚ್ಚು ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ನೀಡಿದೆ. ಕೋವಿಡ್‌ಗೆ ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಕಳೆದ ೧೫ ದಿನಗಳಿಂದ ಕೋರುತ್ತಿದ್ದರೂ ಕೆಲವು ಆಸ್ಪತ್ರೆಗಳು ಶೇ. ೧೫-೨೦ ಹಾಸಿಗೆ ಮಾತ್ರ ನೀಡಿವೆ. ಇನ್ನು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಳ್ಳದಿದ್ದರೆ, ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆ್ಯಂಬುಲೆನ್ಸ್ ಜನರಿಂದ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮಸೀದಿ ತೆರೆಯಲು ಷರತ್ತುಬದ್ಧ ವಿನಾಯಿತಿ
ನವದೆಹಲಿ, ಏ. ೧೫: ಪವಿತ್ರ ರಂಜಾನ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ದೆಹಲಿ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತು. ಆದರೆ, ಮಸೀದಿಗೆ ೫೦ ಜನರಿಗೆ ಪ್ರವೇಶ ಮತ್ತು ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನು ಸೀಮಿತಗೊಳಿಸಿದೆ. ಕೋವಿಡ್-೧೯ ಹಿನ್ನೆಲೆ ರಾಷ್ಟçವ್ಯಾಪಿ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆ ವಿದೇಶಿಯರು ಸೇರಿದಂತೆ ನೂರಾರು ಜನರನ್ನು ಮಸೀದಿಯೊಳಗೆ ಇರಿಸಲಾಗಿತ್ತು. ಅವರಲ್ಲಿ ಅನೇಕರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿAದ ಮಾರ್ಕಾಜ್ ವಿವಾದದ ಕೇಂದ್ರವಾಗಿತ್ತು. ಧಾರ್ಮಿಕ ಸ್ಥಳವನ್ನು ಪುನಃ ತೆರೆಯುವಂತೆ ದೆಹಲಿ ವಕ್ಫ್ ಮಂಡಳಿಯ ಮನವಿ ಪರಿಗಣಿಸಿದ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಪ್ರತಿಬಾ ಎಂ. ಸಿಂಗ್, ಮಸೀದಿಯ ಮೊದಲ ಮಹಡಿಯಲ್ಲಿ ಮಾತ್ರ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದರು. ಜನರ ಮಿತಿ ಹೆಚ್ಚಿಸುವ ಮತ್ತು ಎಲ್ಲಾ ಮಹಡಿಗಳನ್ನು ಮತ್ತೆ ತೆರೆಯುವ ಮನವಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.
ಔಷಧ ಕಾಳಸಂತೆಯಲ್ಲಿ ಮಾರಾಟ ; ಕ್ರಮಕ್ಕೆ ಒತ್ತಾಯ
ಬೆಂಗಳೂರು, ಏ. ೧೫: ಕೋವಿಡ್-೧೯ ಔಷಧ ರೆಮ್‌ಡಿಸಿವಿರ್ ಕಾಳಸಂತೆ ಮಾರುಕಟ್ಟೆಗೆ ಸಂಬAಧಿಸಿದAತೆ ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೆಲಮಂಗಲದಲ್ಲಿರುವ ಎಂ.ಎಸ್. ರಾಮಯ್ಯ ಹರ್ಷ ಆಸ್ಪತ್ರೆ ಘಟಕ ಹರ್ಷ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ಸ್ ಪತ್ರ ಬರೆದಿದೆ. ಈ ಕುರಿತು ಸಿಬಿಐ, ಸಿಸಿಬಿ, ಸಿಐಡಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು, ರೋಗಿಗಳ ಜೀವ ಕಾಪಾಡಲು ಕಡಿಮೆ ದರದಲ್ಲಿ ದಾಸ್ತಾನು ಲಭ್ಯವಾಗುವಂತೆ ಖಾತ್ರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಿ ಅಂಡ್ ಎಫ್ (ಕ್ಲಿಯರಿಂಗ್ ಅಂಡ್ ಫಾರ್ವಡಿಂಗ್) ಏಜೆಂಟರು ಮತ್ತು ಸಗಟು ವಿತರಕರು ಲಸಿಕೆ ಅಗತ್ಯವಿರುವವರಿಗೆ ರೆಮ್ ಡಿಸಿವಿರ್ ಇಂಜೆಕ್ಷನ್ ಪೂರೈಸುತ್ತಿಲ್ಲ. ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿದೆ. ರೋಗಿಗಳ ಪ್ರಾಣ ಕಾಪಾಡುವಲ್ಲಿ ಇದು ಪ್ರಮುಖವಾಗಿದೆ. ಅಲ್ಲದೇ, ಏಜೆನ್ಸಿಗಳೊಂದಿಗೆ ಔಷಧ ನಿಯಂತ್ರಕರು ಕೈ ಜೋಡಿಸಿರಬಹುದೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ರೆಮ್‌ಡಿಸಿವಿರ್ ಕಾಳ ಸಂತೆ ಮಾರಾಟ ಬಗ್ಗೆ ತನಿಖೆ ನಡೆದರೆ ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡುವುದಾಗಿ ಅವರು ತಿಳಿಸಿದರು.
ಮೇ ೪ ರ ಬಳಿಕ ಸಂಬಳ ಹೆಚ್ಚಳದ ಬಗ್ಗೆ ಚರ್ಚೆ
ಬೀದರ್, ಏ. ೧೫: ಸರ್ಕಾರ ಇನ್ನೂ ಸಾರಿಗೆ ಇಲಾಖೆ ನೌಕರರ ಬಗ್ಗೆ ಮೃದು ಧೋರಣೆಯನ್ನೇ ಹೊಂದಿದೆ. ನಮ್ಮ ಸಿಬ್ಬಂದಿಗಳು ಎಂಬ ಭಾವನೆ ಯಲ್ಲಿಯೇ ಇದ್ದೇವೆ. ಕೊರೊನಾ ಎರಡನೇ ಅಲೆ ಬಹಳ ದೊಡ್ಡ ಮಟ್ಟ ದಲ್ಲಿದೆ, ಇನ್ನೊಂದೆಡೆ ಮುಷ್ಕರ ಮಾಡಿದರೆ ಜನರ ಆಕ್ರೋಶಕ್ಕೆ ನಾವೆಲ್ಲರೂ ತುತ್ತಾಗಬೇಕಿದೆ. ಕೆಲಸಕ್ಕೆ ಹಾಜರಾಗಿ, ಮೇ ೪ರ ನಂತರ ಸಂಬಳ ಹೆಚ್ಚಿಸಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಸರ್ಕಾರ ಬರುತ್ತದೆ ಎಂದು ಸಚಿವ ಲಕ್ಷö್ಮಣ ಸವದಿ ಆಶ್ವಾಸನೆ ನೀಡಿದರು. ಈ ಬಗ್ಗೆ ಇಂದು ಬೀದರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಾರಿಗೆ ಇಲಾಖೆ ಸಚಿವ ಉಪ ಮುಖ್ಯಮಂತ್ರಿ ಲಕ್ಷö್ಮಣ ಸವದಿ, ಇಲಾಖೆ ನೌಕರರಿಗೆ ಜನಸಾಮಾನ್ಯರ ಕಷ್ಟವೇಕೆ ಅರ್ಥವಾಗುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಮುಖ್ಯ ಮಂತ್ರಿಗಳು, ನಾನು ಎಷ್ಟು ಬಾರಿ ವಿನಂತಿ ಮಾಡಿಕೊಂಡರೂ ಕೇಳುತ್ತಿಲ್ಲ, ಈಗ ಸಾರ್ವಜನಿಕರು ಕೂಡ ತಮಗೆ ಕಷ್ಟವಾಗುತ್ತಿದೆ, ಮುಷ್ಕರ ಹಿಂತೆಗೆದು ಕೊಳ್ಳಿ ಎಂದು ಕೇಳುತ್ತಿದ್ದಾರೆ, ಕೊರೊನಾ ಸಂಕಷ್ಟ ಕಾಲದಲ್ಲಿ ಈ ರೀತಿ ಮಾಡಿದರೆ ಬಡ, ಕೆಳ ಮಧ್ಯಮ ವರ್ಗದ ಜನರಿಗೆ ಕಷ್ಟವಾಗುತ್ತದೆ ಎಂದರು.
ಭಾರತೀಯ ಗಡಿ ರೇಖೆಯನ್ನು ದಾಟಿದ ಪಾಕಿಸ್ತಾನ ಪ್ರಜೆ
ನವದೆಹಲಿ, ಏ. ೧೫: ತಿಳಿಯದೇ ಅಜಾಗರೂಕತೆಯಿಂದ ಭಾರತೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಪಾಕಿಸ್ತಾನ ಪ್ರಜೆಯನ್ನು ಗುರುವಾರ ಮಾನವೀಯ ನೆಲೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಹಿಂದಿರುಗಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪೂಂಚ್-ರಾವಲಕೋಟೆ ಕ್ರಾಸಿಂಗ್ ಪಾಯಿಂಟ್‌ನಲ್ಲಿ ಭಾರತೀಯ ಸೇನೆಯು ಗುಲಾಮ್ ಖಾದಿರ್ ಎಂಬ ಪಾಕಿಸ್ತಾನ ಪ್ರಜೆಯನ್ನು ಪಿಒಕೆ ಸೇನಾಧಿಕಾರಿಗಳಿಗೆ ಹಸ್ತಾಂತರಿಸಿದೆ. ಸೇನಾ ಮೂಲಗಳ ಪ್ರಕಾರ ಪಾಕ್ ಅಕ್ರಮಿತ ಕಾಶ್ಮೀರದ ನಿಕಿಯಾಲ್ ಪ್ರದೇಶದ ಘಿಮ್ ಗ್ರಾಮದ ನಿವಾಸಿಯಾಗಿದ್ದ ಖಾದೀರ್ ತಿಳಿಯದೇ ಎಲ್‌ಒಸಿ ಗಡಿ ದಾಟಿ ಭಾರತೀಯ ಗಡಿ ಪ್ರವೇಶಿಸಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಅಜಾಗರೂಕತೆಯಿಂದ ಗಡಿ ದಾಟಿದ್ದಾನೆ ಎಂದು ಮನಗಂಡ ಅಧಿಕಾರಿಗಳು ಆತನನ್ನು ಪಾಕಿಸ್ತಾನಕ್ಕೆ ಮರಳಿಸಲು ನಿರ್ಧರಿಸಿದ್ದರು.
ಮಹತ್ವದ ಹುದ್ದೆಗಳಿಗೆ ಇಬ್ಬರು ಭಾರತೀಯರ ನೇಮಕ
ವಾಷಿಂಗ್ಟನ್, ಏ. ೧೫: ಅಮೇರಿಕಾ ಸರ್ಕಾರದಲ್ಲಿ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯ-ಅಮೇರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ಪ್ರಕಟಿಸಿದ್ದಾರೆ. ಶ್ವೇತಭವನ, ಮೀರಾ ಜೋಶಿ ಅವರನ್ನು ಸಾರಿಗೆ ಇಲಾಖೆಯ ವಾಹನ ನಿಯಂತ್ರಣ ಹಾಗೂ ಸುರಕ್ಷತಾ ಕಾರ್ಯನಿರ್ವಾಹಕರನ್ನಾಗಿ ನೇಮಿಸಿದೆ. ಜಲ ಹಾಗೂ ಎನ್ವಿರಾನ್ಮೆಂಟಲ್ ರಕ್ಷಣಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕರಾಗಿ ರಾಧಿಕಾ ಫಾಕ್ಸ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಪರಿಸರ ಸಂರಕ್ಷಣಾ ಸಂಸ್ಥೆ(ಇಪಿಎ)ಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಪೈಸಲ್ ಅಮೀನ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.