ಸೋಮವಾರಪೇಟೆ,ಏ.೧೬: ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಕೋವರ್‌ಕೊಲ್ಲಿ ಹಾಗೂ ಐಗೂರು ವರೆಗಿನ ರಸ್ತೆ, ಕಾಜೂರು ಜಂಕ್ಷನ್‌ನಿAದ ಕಾಜೂರು ಗ್ರಾಮ ಸಂಪರ್ಕ ರಸ್ತೆಯಲ್ಲಿ ದಿನಂಪ್ರತಿ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಕಾಡಾನೆಗಳು ರಸ್ತೆ ದಾಟುತ್ತಿದ್ದು, ಈ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ವಾಹನಗಳು ಎಚ್ಚರಿಕೆ ವಹಿಸಬೇಕಿದೆ.ಯಡವನಾಡು ಮೀಸಲು ಅರಣ್ಯ, ಕಾರೇಕೊಪ್ಪದಿಂದ ಕೋವರ್‌ಕೊಲ್ಲಿ, ಕಾಜೂರು, ಐಗೂರು ವ್ಯಾಪ್ತಿಯಲ್ಲಿರುವ ಕಾಫಿ ತೋಟ, ಕೆರೆಗಳಿಗೆ ನೀರು ಕುಡಿಯಲೆಂದು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಹತ್ತಾರು ಆನೆಗಳು ರಾಜ್ಯ ಹೆದ್ದಾರಿ ದಾಟುತ್ತಿದ್ದು, ಈ ಸಮಯದಲ್ಲಿ ಸಂಚರಿಸುವ ಮಂದಿ ಜಾಗರೂಕತೆಯಿಂದ ತೆರಳಬೇಕಿದೆ. - ವಿಜಯ್