ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಬೆಳೆಸಿದ ಭಾರತದ ಶ್ರೇಣಿಕೃತ ಜಾತಿಪದ್ಧತಿ ವ್ಯವಸ್ಥೆಯ ನೋವು, ಸಂಕಟ ಉಂಡು, ಹೊರದೇಶಗಳಿಗೆ ಹೋಗಿ, ಅಪಾರ ವಿದ್ವತ್ ಸಂಪಾದಿಸಿ ಭಾರತದಲ್ಲಿ ಶತ ಶತಮಾನಗಳಿಂದ ಬೇರುಬಿಟ್ಟಿದ್ದ ಎಲ್ಲ ತರಹದ ಅಸಮಾನತೆಗಳನ್ನು ಬುಡ ಸಮೇತ ಕಿತ್ತೊಗೆಯುವ ಐತಿಹಾಸಿಕ ಕೆಲಸಕ್ಕೆ ಕೈ ಹಾಕಿದ ಮಹಾನ್ ವ್ಯಕ್ತಿ. ಕೆಲವು ಮಹಾನ್ ವ್ಯಕ್ತಿಗಳು ಇತಿಹಾಸ ಸೃಷ್ಟಿಸಿದರೆ, ಅಂಬೇಡ್ಕರ್ ಇತಿಹಾಸವನ್ನೇ ಬದಲಿಸಿದ ವ್ಯಕ್ತಿ. ಇವರು ರಚಿಸಿದ ಸಂವಿಧಾನ ವಿಶ್ವದ ಎಲ್ಲಾ ಸಂವಿಧಾನಗಳಿಗಿAತ ಅತ್ಯುತ್ತಮ ವಾದುದ್ದಾಗಿದೆ. ಸಾವಿರಾರು ಜಾತಿಗಳನ್ನು, ಹತ್ತಾರು ಧರ್ಮಗಳನ್ನು ನೂರಾರು ಸಂಸ್ಕೃತಿಗಳನ್ನು ಬೃಹತ್ ಜನ ಸಮುದಾಯಗಳನ್ನು ಹೊಂದಿದ ಭಾರತದಲ್ಲಿ ಒಂದಾಗಿ ಬದುಕಲು ಸಾಧ್ಯವಾಗುವುದು ಈ ಸಂವಿಧಾನದಿAದಲೇ. ಭಾರತದ ಸಂವಿಧಾನದ ಗಟ್ಟಿ ಅಡಿಪಾಯದಿಂದಾಗಿ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಇಡೀ ವಿಶ್ವ ಅಚ್ಚರಿಯಿಂದ ನೋಡುವಂತಾಗಿದೆ. ಎಲ್ಲ ಗೊಡ್ಡು ಸಂಪ್ರದಾಯಗಳನ್ನು ಮತ್ತು ಮೂಢನಂಬಿಕೆಗಳನ್ನು ಧಿಕ್ಕರಿಸಿ, ವೈಜ್ಞಾನಿಕ ಮಾರ್ಗದಲ್ಲಿ ನಡೆಯುವುದನ್ನು ಹೇಳಿಕೊಟ್ಟವರು ಅಂಬೇಡ್ಕರ್. ಈ ಗುಣದಿಂದ ಮಾನವನನ್ನು ಗೌರವಿಸಬೇಕೆ ಹೊರತು ಅವನ ಹುಟ್ಟಿನಿಂದಲ್ಲ ಎಂಬುದನ್ನು ಅವರು ಪ್ರತಿಪಾದಿಸಿದರು.

ಅಂಬೇಡ್ಕರ್ ಹೊಂದಿದ್ದ ಪ್ರತಿಭೆ, ಅಪಾರ ಪಾಂಡಿತ್ಯ, ಪ್ರಾಮಾಣಿಕತೆ, ಸ್ವಾಭಿಮಾನ ಹಾಗೂ ಸಚ್ಚಾರಿತ್ರö್ಯ, ಜೀವನ ಶೈಲಿಗಳಿಂದಾಗಿ ಅವರು ಜಗತ್ತಿನ ಒಬ್ಬ ಅಸಾಮಾನ್ಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಎಲ್ಲ ರೀತಿಯ ಶೋಷಣೆ ಮತ್ತು ಅಸಮಾನತೆಗಳ ವಿರುದ್ಧ ಸೆಟೆದು ನಿಂತು ಜ್ವಾಲಾಮುಖಿ ಯಾದರು. ಡಾ. ಅಂಬೇಡ್ಕರ್ ಚಲನರಹಿತ ಭಾರತದ ಸಾಮಾಜಿಕ ವ್ಯವಸ್ಥೆಯ ದಿಕ್ಕನ್ನು ಬದಲಿಸಿ ಚಲನಶೀಲವಾಗುವಂತೆ ಮಾಡಿದರು ಅವರು.

ಸುಮಾರು ೪೦ ವರ್ಷಗಳ ಕಾಲ ಸತತವಾಗಿ ಅಸಮಾನತೆಯ ವಿರುದ್ಧದ ಹೋರಾಟವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿ ಜಯಗಳಿಸುವಲ್ಲಿ ಅಂಬೇಡ್ಕರ್ ಯಶಸ್ವಿಯಾದರು. ಅವರು ಜಾತಿವಾದಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು. ಜಾತಿ ಅನಿಷ್ಠ ಪದ್ಧತಿಯಾಗಿ, ಈ ದೇಶದ ಏಳಿಗೆಗೆ ಅಡ್ಡಗೋಡೆಯಾಗಿ ಬೆಳೆದಿದೆ. ಇದನ್ನು ಪೂರ್ಣವಾಗಿ ಕಿತ್ತೊಗೆಯಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು. ಜಾತಿಪದ್ಧತಿಯ ಬೇರನ್ನು ನಾಶಪಡಿಸಿ ನವಭಾರತ ಕಟ್ಟಲು ಅಂಬೇಡ್ಕರ್ ತಾವು ಬದುಕಿರುವವರೆಗೆ ಅವಿರತವಾಗಿ ಹೋರಾಡಿದರು.

ದೇಶ ಕಟ್ಟುವಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಬದ್ಧತೆ ಇರಬೇಕು, ಎಂದು ಪ್ರತಿಪಾದಿಸಿದ ಅಂಬೇಡ್ಕರ್ ವಿಶಾಲ ದೃಷ್ಟಿಕೋನದ ಪ್ರಶ್ನಾತೀತ, ಅಪ್ಪಟ ದೇಶ ಪ್ರೇಮಿಯಾಗಿದ್ದರು. ಅವರು “ನಾನೋರ್ವ ಭಾರತೀಯ, ಹಾಗೂ ಭಾರತೀಯ ರಾಷ್ಟಿçÃಯತೆಯ ಪ್ರತಿಪಾದಕ” ಎಂದ ಅಂಬೇಡ್ಕರ್, ಎಲ್ಲ ಶೋಷಿತ ವರ್ಗಗಳನ್ನು ಜಾಗೃತಗೊಳಿಸಿ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು, ಜಾತ್ಯತೀತ ಅಖಂಡ ಭಾರತವನ್ನು ಕಟ್ಟಿಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಂಬೇಡ್ಕರ್ ಬದುಕು ತೆರೆದ ಪ್ರಸ್ತಕದಂತಿತ್ತು. ಅವರು ಎಂದೂ ದ್ಪಂದ್ವ ನಿಲುವು ತಾಳುತ್ತಿರಲಿಲ್ಲ. ಪಾಂಡಿತ್ಯ ಪೂರ್ಣ ಚಿಂತನೆ ಮತ್ತು ಪ್ರಾಮಾಣಿಕತೆ ಕಾರ್ಯಶೀಲತೆ ಇವೆರಡು ಅಂಬೇಡ್ಕರ್ ಬದುಕಿನಲ್ಲಿ ಹೆಣೆಯಲ್ಪಟ್ಟವು. ವಿದೇಶದಲ್ಲಿ ಶಿಕ್ಷಣ ಪಡೆದು ಸ್ವಾರ್ಥಿಯಾಗದೆ. ವೈಭೋಗದ ಜೀವನ ನಡೆಸದೆ, ಅಪರಿಮಿತ ಜ್ಞಾನ ಪಡೆದು ಭಾರತಕ್ಕೆ ವಾಪಸ್ಸು ಬಂದು, ಶೋಷಿತರ ಪರವಾಗಿ ನಿರಂತರ ಹೋರಾಟವನ್ನು ಹಮ್ಮಿಕೊಂಡರು. ಭಾರತದ ಸಂವಿಧಾನ ರಚಿಸುವ ಮುಖಾಂತರ ಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದವರಿಗೆ ಕಾನೂನುಬದ್ಧವಾಗಿ ಹಕ್ಕುಗಳನ್ನು ಕೊಡಿಸುವಲ್ಲಿ ಸಫಲರಾದರು. ಸಮಾನತೆಯನ್ನು ಪ್ರತಿಪಾದಿಸಿದರೂ, ಶೋಷಿತರಿಗೆ ವಿಶೇಷ ಸವಲತ್ತುಗಳನ್ನು ನೀಡಿ ಶೋಷಿತ ವರ್ಗವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವುದೇ ಡಾ. ಅಂಬೇಡ್ಕರ್ ಅವರ ಅಂತಿಮ ಗುರಿಯಾಗಿತ್ತು. ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೆ, ಜಾತೀಯತೆ ಮತ್ತು ಶೋಷಣೆಗಳ ರುದ್ರನರ್ತನ ಮುಂದುವರೆದು, ಶೋಷಿತರ ಬದುಕು ಬರ್ಬರವಾಗುತ್ತಿತ್ತು.

ಅವರು ಪ್ರತಿಪಾದಿಸಿದ ಪ್ರಜಾಸತ್ತಾತ್ಮಕ ಮಾರ್ಗ ಯಾವುದೇ ಅಡ್ಡಮಾರ್ಗ ಅಥವಾ ಹಿಂಸಾಮಾರ್ಗ ಆಗಿತ್ತು. ಅದೊಂದು ನಾಗರೀಕ ಮಾರ್ಗ ಆಗಿದೆ. ಹೀಗಾಗಿ ಇಡೀ ವಿಶ್ವವೇ ಅದನ್ನು ಅನುಸರಿಸಲು ಮುಂದೆ ಬರುತ್ತಿದೆ. ಪ್ರಜಾಪ್ರಭುತ್ವ ದೇಶದ ಎಲ್ಲ ಜನರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಕಾನೂನಿನ ಮೂಲಕ ಬದಲಾವಣೆ ಮಾಡುವ ಕ್ರಮವಾಗಿದೆ.

ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ದೊರಕುವುದು ಎಂದು ಅವರು ದೃಢವಾಗಿ ಹೇಳಿದರು. ಅಸ್ವೃಶ್ಯತೆ ನಿವಾರಣೆಯಾಗದಿದ್ದರೆ ದುರ್ಬಲ ವರ್ಗಗಳ ವಿವೇಚನೆಯಾಗದಿದ್ದರೆ ದೇಶ ಸ್ವಾತಂತ್ರö್ಯ ಪಡೆದರೂ. ಅರ್ಥಹೀನ ವಾಗುತ್ತದೆ ಎಂದು ಅವರು ಶೋಷಿತರ ಏಳಿಗೆಯನ್ನು ಸ್ವಾತಂತ್ರö್ಯ ಹೋರಾಟ ಖಾತ್ರಿಪಡಿಸಬೇಕು ಎಂದು ಆಗ್ರಹಪಡಿಸಿದರು. ಶೋಷಿತರ ಬಡ ಜೀವನದಲ್ಲಿ ಚೈತನ್ಯ ತುಂಬಿದರು. ಅವರಿಗೆ ಊರುಗೋಲಾದರು. ಎಲ್ಲದಕ್ಕಿಂತ ಹೆಚ್ಚಾಗಿ ಮನುಕುಲದ ಸ್ವಾಭಿಮಾನದ ಹೋರಾಟದ ಸಂಕೇತವಾದರು. ಅವರ ಜೀವನದಲ್ಲಿ ಆದರ್ಶ ವಾಸ್ತವತೆಯ ಸಂಗಮವನ್ನು ಚಿಂತನ-ಪಾAಡಿತ್ಯ-ಕ್ರಿಯಾಶೀಲತೆಗಳ ಸಮ್ಮಿಲನವನ್ನು ಧಾರ್ಮಿಕತೆ ಮತ್ತು ಕ್ರಾಂತಿ ಮನೋಧರ್ಮಗಳ ಸಮಾನವನ್ನು ಕಾಣಬಹುದು.

ಇಡೀ ಸಮಾಜದ ಮುಂದೆ ತಮ್ಮ ಅಭಿಮತವನ್ನು ಮಂಡಿಸುವ ಹೋರಾಟವನ್ನು ಅವರು ನಡೆಸಿದಾಗ ಅವರಿಗೆ ಹಣ ಬಲವಿರಲಿಲ್ಲ, ಬಲವಾದ ಪಕ್ಷವಿರಲಿಲ್ಲ, ಸತ್ಯವನ್ನು ಸಮಾಜಕ್ಕೆ ಮನಗಾಣಿಸಿ ಕೊಡಲು ಅವರು ತಮ್ಮ ವಿದ್ವತ್ ವiತ್ತು ಪ್ರತಿಭೆ ಧೈರ್ಯಗಳನ್ನೇ ಬಳಸಿಕೊಂಡರು.

ಎತ್ತಿನಗಾಡಿ ಹತ್ತುವ ಹಕ್ಕು ನಿರಾಕರಿಸಲ್ಪಟ್ಟ ಹೋಟೆಲ್ ಪ್ರವೇಶಕ್ಕೆ ನಿಷೇಧಿಸಲ್ಪಟ್ಟ ಅಸ್ಪೃಶ್ಯ ವ್ಯಕ್ತಿಯೊಬ್ಬ ಭಾರತದ ಭವಿಷ್ಯವನ್ನು ರೂಪಿಸುವಂತ ಮಹಾಪಾತ್ರ ನಿರ್ವಹಿಸಲು ಆಯ್ಕೆಯಾಗಿದ್ದು ಒಂದು ಮಹೋನ್ನತ ಘಟನೆಯೇ ಆಗಿದೆ. ಬುದ್ಧ-ಬಸವರ ನಂತರ, ಭರತ ಖಂಡದಲ್ಲಿ ಬಿರುಗಾಳಿಯಾಗಿ ಬೀಸಿ, ಸಿಡಿಲಾಗಿ ಸಿಡಿದೂ ಎಲ್ಲರಿಗೆ ಸಮಾನ ರಾಜಕೀಯ ಹಕ್ಕು ನೀಡಿ ಶೋಷಿತರಿಗೆ ವಿಶೇಷ ಅವಕಾಶಗಳನ್ನು ಒದಗಿಸಿ ಭಾರತ ಕ್ಕೊಂದು ಹಿರಿಮೆಯನ್ನು ತಂದು ಕೊಟ್ಟ ಚೇತನ, ಅಂಬೇಡ್ಕರ್ ಅವರಾಗಿದ್ದಾರೆ.

-ನಿರ್ಮಲ ಹೆಚ್. ಪಿ.

ಸಹಾಯಕ ಪ್ರಾಧ್ಯಾಪಕರು, ಮಡಿಕೇರಿ.