ಪತ್ನಿಗೆ ೨೫ ಬಾರಿ ಇರಿದು ಕೊಂದ ಪತಿ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ನವದೆಹಲಿ, ಏ. ೧೨: ಪತ್ನಿ ಅಕ್ರಮ ಸಂಬAಧ ಹೊಂದಿದ್ದಾಳೆ ಎಂದು ಆರೋಪಿಸಿ ಪತಿ ನಡುರಸ್ತೆಯಲ್ಲೇ ಪತ್ನಿಗೆ ೨೫ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದು, ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೆಹಲಿಯ ಮಾರುಕಟ್ಟೆಯೊಂದರಲ್ಲಿ ಈ ಕೃತ್ಯ ನಡೆದಿದೆ. ಆರೋಪಿ ಹರೀಶ್ ಮೆಹ್ತಾ ತನ್ನ ಪತ್ನಿ ೨೬ ವರ್ಷದ ನೀಲುಳನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ನೀಲು ದೆಹಲಿಯ ಸಫ್ದಜಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹರೀಶ್ ಮೆಹ್ತಾ ಪತ್ನಿಗೆ ಇರಿಯುತ್ತಿದ್ದ ವೇಳೆ ಸಾರ್ವಜನಿಕರು ಆಕೆಯನ್ನು ರಕ್ಷಿಸಲು ಮುಂದಾದರು. ಆದರೆ ಈ ವೇಳೆ ಹರೀಶ್ ಮುಂದೆ ಬಂದವರಿಗೆ ಚಾಕು ತೋರಿಸಿ ಹೆದರಿಸಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಹರೀಶ್ ಮೆಹ್ತಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರು ಸಹಕರಿಸದಿದ್ದರೆ ಲಾಕ್ ಡೌನ್ ಅನಿವಾರ್ಯ : ಸಿ.ಎಂ.

ಬೀದರ್, ಏ. ೧೨ : ಲಾಕ್‌ಡೌನ್ ಮಾಡಬಾರದು ಎಂದಾದರೆ ಜನರು ಅದಕ್ಕೆ ಸರಿಯಾದ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೀದರ್‌ನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು, ಜನಜಂಗುಳಿ ಸೇರಬಾರದು, ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದರು. ಸರ್ಕಾರ ಪದೇ ಪದೇ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಅರಿವು ಮೂಡಿಸುತ್ತಿದ್ದು, ಅದಕ್ಕೆ ಜನರು ಸ್ಪಂದಿಸಬೇಕು, ಇಲ್ಲದಿದ್ದರೆ ಲಾಕ್‌ಡೌನ್ ಅನಿವಾರ್ಯವಾಗಿ ಮಾಡಬೇಕಾಗುತ್ತದೆ,

ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಆರಿಫ್ ಮೊಹಮ್ಮದ್ ಖಾನ್!

ತಿರುವನಂತಪುರA, ಏ. ೧೨: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಲೆ ಮೇಲೆ ಇರುಮುಡಿ ಹೊತ್ತು, ಕೊರಳಲ್ಲಿ ಮಾಲೆ ಧರಿಸಿ, ೧೮ ಮೆಟ್ಟಿಲನ್ನು ಹತ್ತಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ ಅವರು ಇರುಮುಡಿ ಕಟ್ಟಿಕೊಂಡು ಐದು ಕಿ.ಮೀ ಪಾದಯಾತ್ರೆ ನಡೆಸಿ ಶಬರಿಮಲೆ ಸಂಪ್ರದಾಯದAತೆ ಅಯ್ಯಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಆರಿಫ್ ಮೊಹಮ್ಮದ್ ಖಾನ್‌ರಿಗೆ ಅವರ ಪುತ್ರ ಕಬೀರ್ ಕೂಡ ಸಾಥ್ ನೀಡಿದರು. ಕೇರಳದಲ್ಲಿ ವಿಷು ಹಬ್ಬ ಹಿನ್ನೆಲೆಯಲ್ಲಿ ತಿಂಗಳ ಪೂಜೆ ನಡೆಯುತ್ತದೆ. ಹೀಗಾಗಿ ದೇವಾಲಯ ತೆರೆಯಲಾಗಿದೆ. ಇನ್ನು ರಾಜ್ಯಪಾಲರು ಅಯ್ಯಪ್ಪನ ದರ್ಶನ ಪಡೆದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.