ಮಡಿಕೇರಿ, ಏ. ೧೨: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃ ಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಸಣ್ಣ ಕಥಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಥಾ ಸ್ಪರ್ಧೆ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಹವ್ಯಕ ಮಹಿಳೆಯರು ಯಾವುದೇ ವಯೋಮಿತಿ ಇಲ್ಲದೇ ಭಾಗವಹಿಸಬಹುದಾಗಿದೆ. ಯಾವುದೇ ಸೀಮೆಯ ಹವ್ಯಕ ಭಾಷೆಯನ್ನಾದರೂ ಬಳಸಿ ಕಥೆ ರಚಿಸಬಹುದಾಗಿದೆ. ಆದರೆ, ಈ ಹಿಂದೆ ಪ್ರಥಮ ಸ್ಥಾನಗಳಿಸಿದವರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಎಲ್ಲೂ ಪ್ರಕಟವಾಗದ ಸಾಮಾಜಿಕ ಕಥೆ ಸಾಧಾರಣ ೮ ಪುಟಕ್ಕೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ ಅಥವಾ ಟೈಪ್ ಮಾಡಿ ಎರಡು ಸಾವಿರ ಪದಗಳಿಗೆ ವೀರದಂತೆ ಬರೆದು, ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿ ಅಂಚೆ ಮೂಲಕ ಕಳುಹಿಸಬೇಕು. ಆಸಕ್ತರು ಮೇ ೩೦ರೊಳಗೆ ವಿಜಯಾಸುಬ್ರಮಣ್ಯ ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ. ಪೋಸ್ಟ್- ಕುಂಬಳೆ-೬೭೧೩೨೧ ಕಾಸರಗೋಡು ಜಿಲ್ಲೆ. ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: ೮೫೪೭೨೧೪೧೨೫. ೬೨೩೮೫೩೭೨೬೭