ಮಡಿಕೇರಿ, ಏ. ೧೧: ತಾ. ೧೪ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಕೊಡವ ಬುಡಕಟ್ಟು ಸಮುದಾಯದ ಹೊಸ ವರ್ಷ ಎಡಮ್ಯಾರ್ ೧ ಆಚರಣೆ ಮಾಡಲಾಗುವುದು ಪತ್ರಿಕಾ ಪ್ರಕಟಣೆಯಲ್ಲಿ ಸಿಎನ್‌ಸಿ ಸಂಚಾಲಕ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಬೆಟ್ಟತ್ತೂರು ಗ್ರಾಮದ ಕೂಪದೀರ ಕುಟುಂಬದ ನೆಲೆಯಲ್ಲಿ ಜೋಡೆತ್ತುಗಳ ಸಹಾಯದಿಂದ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಉಳುಮೆ ಮಾಡಿ. ಬಳಿಕ ಮಡಿಕೇರಿ ಮಿಡಲ್ ಗ್ರೌಂಡ್ ಕೋಲ್ ಮಂದ್‌ನಲ್ಲಿ ಸಭೆ ನಡೆಸಿ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಬುಡಕಟ್ಟು ಜನಾಂಗವನ್ನು ಕೊಡವ ಪ್ರದೇಶದ ಪ್ರಿಮೆಟಿವ್ (ಪ್ರಾಚೀನ) ಬುಡಕಟ್ಟು ಎಂದು ಗುರುತಿಸಬೇಕು, ಸಮಗ್ರ ಸಬಲೀಕರಣಕ್ಕಾಗಿ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಜನಾಂಗವನ್ನು ಸಂವಿಧಾನದ ೩೪೦ ಮತ್ತು ೩೪೨ ನೇ ವಿಧಿಗಳ ಅಡಿಯಲ್ಲಿ ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು ಸೇರಿದಂತೆ ಇನ್ನಿತರ ನಿರ್ಣಯವನ್ನು ಈ ಸಂದರ್ಭ ಅಂಗೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.