ಕೂಡಿಗೆ, ಏ. ೧೧: ಸೋಮವಾರಪೇಟೆ ತಾಲೂಕು ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ವತಿಯಿಂದ ಹೆಬ್ಬಾಲೆಯ ಸಂತೆ ಮಾರುಕಟ್ಟೆಯ ಸಭಾಂಗಣದಲ್ಲಿ ತಾ. ೧೨ ರಂದು (ಇಂದು) ಕಿಸಾನ್ ಸಮ್ಮಾನ್ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭೂಪೋಷಣಾ ಹಾಗೂ ಜಲಸಂರಕ್ಷಣೆ ಮಣ್ಣು ಮತ್ತು ನೀರು ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಜಗದೀಶ್ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಲಿದ್ದಾರೆ.