ಮಡಿಕೇರಿ, ಏ. ೧೧ : ಜಿಲ್ಲೆಯನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಯಾಗಿರುವ ಹುಲಿ ಹಾವಳಿ, ವನ್ಯಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಅರಣ್ಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಎಂಟು ದಿನದೊಳಗೆ ರಾಜ್ಯ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ, ಸಭೆ ನಡೆಸಲಿದ್ದಾರೆ ಎಂದು ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯಿAಡ ರವಿ ಕುಶಾಲಪ್ಪ ತಿಳಿಸಿದ್ದಾರೆ.
ಶಾಂತೆಯAಡ ರವಿ ಕುಶಾಲಪ್ಪ ಅವರು ಇಂದು ಬಂಡಿಪುರ ಅರಣ್ಯ ವಸತಿ ಗೃಹದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರನ್ನು ಭೇಟಿ ಮಾಡಿ ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಅಲ್ಲದೆ, ಸ್ಥಳದಿಂದಲೇ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿ ಸಚಿವರೊಂದಿಗೆ ಮಾತನಾಡಿಸಿದಾಗ ಶಾಸಕರು ಕೂಡ ಸಮಸ್ಯೆ ಗಂಭೀರತೆ ಬಗ್ಗೆ ಮನವರಿಕೆ ಮಾಡಿ ಕೊಟ್ಟರಲ್ಲದೆ ಜಿಲ್ಲೆಗೆ ಆಗಮಿಸುವಂತೆ ಕೋರಿದರು.
ಈ ಸಂಬAಧ ಜಿಲ್ಲೆಯ ಪ್ರತಿನಿಧಿಗಳು, ಸಚಿವರು, ಶಾಸಕರುಗಳಾದಿಯಾಗಿ ಕೇಂದ್ರ ಸಚಿವರ ಬಳಿ ನಿಯೋಗ ತೆರಳುವ ಬಗ್ಗೆಯೂ ಸಲಹೆ ನೀಡಿದರು.
ಸಚಿವರ ಭೇಟಿ ಸಂದರ್ಭ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಕಿಮ್ಮುಡಿರ ಜಗದೀಶ್, ಮಕ್ಕಂದೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕುಂಬುಗೌಡನ ಮಧು ಗೋಪಾಲ ಇದ್ದರು