ಮಡಿಕೇರಿ, ಏ. ೧೧: ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ೨ ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ನಗರ ಪುನರ್ವಸತಿ ಹಾಗೂ ೩ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣ, ಅನುತ್ತೀರ್ಣ. ಶೇ.೪೦ ಕ್ಕಿಂತ ಮೇಲ್ಪಟ್ಟು ಶೇ.೭೫ ಕ್ಕಿಂತ ಕಡಿಮೆ ಇರಬೇಕು. ೧೮ ರಿಂದ ೪೫ ವರ್ಷದ ವಯೋಮಾನದವರಾಗಿರಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣ, ಅನುತ್ತೀರ್ಣ. ಶೇ.೪೦ ಕ್ಕಿಂತ ಮೇಲ್ಪಟ್ಟು ಶೇ.೭೫ ಕ್ಕಿಂತ ಕಡಿಮೆ ಇರಬೇಕು. ೧೮ ರಿಂದ ೪೫ ವರ್ಷದೊಳಗಿರಬೇಕು.
ಹುದ್ದೆಗಳು ಖಾಲಿ ಇರುವ ವಿವರ : ಯುಆರ್‌ಡಬ್ಲುö್ಯ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ. ವಿಆರ್‌ಡಬ್ಲುö್ಯ:-ಮಡಿಕೇರಿ ತಾಲೂಕಿನ ಬಲ್ಲಮಾವಟಿ, ಚೆಂಬು, ಕುಂಜಿಲ, ಕೊಣಂಜಗೇರಿ, ಎಮ್ಮೆಮಾಡು, ಕುಂದಚೇರಿ. ಸೋಮವಾರಪೇಟೆ ತಾಲೂಕಿನ ಬೇಳೂರು, ಚೆಟ್ಟಳ್ಳಿ, ದುಂಡಳ್ಳಿ, ಹಂಡ್ಲಿ, ನೇರುಗಳಲೆ, ಕಿರಗಂದೂರು, ಆಲೂರು ಸಿದ್ದಾಪುರ. ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಅರುವತ್ತೋಕ್ಲು, ಬಾಳೆಲೆ, ಬಿರುನಾಣಿ, ಬಲ್ಯಮಂಡೂರು, ಬಿಟ್ಟಂಗಾಲ, ದೇವರಪುರ, ಗೋಣಿಕೊಪ್ಪ, ಹೊಸೂರು, ಹಾಲುಗುಂದ, ನಿಟ್ಟೂರು, ನಾಲ್ಕೇರಿ, ಪೊನ್ನಂಪೇಟೆ, ಪೊನ್ನಪ್ಪಸಂತೆ, ಟಿ. ಶೆಟ್ಟಿಗೇರಿ, ಕದನೂರು, ಕೆ. ಬಾಡಗ, ಕಿರುಗೂರು, ಪಾಲಿಬೆಟ್ಟ, ತಿತಿಮತಿ, ಶ್ರೀಮಂಗಲ, ಚೆನ್ನಯ್ಯನಕೋಟೆ.
ಅರ್ಜಿ ನಮೂನೆಗಳನ್ನು ಸಂಬAಧಿಸಿದ ತಾಲೂಕಿನ ಎಂಆರ್ ಡಬ್ಲುö್ಯಗಳಿಂದ ಉಚಿತವಾಗಿ ಪಡೆದು ತಾ. ೨೦ ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಸಂಪತ್‌ಕುಮಾರ್ ತಿಳಿಸಿದ್ದಾರೆ.