*ಗೋಣಿಕೊಪ್ಪಲು, ಏ. ೧೧: ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆ ಗೋಣಿಕೊಪ್ಪದಲ್ಲಿ ಕ್ಲಸ್ಟರ್‌ನ ಶಿಕ್ಷಕರಿಗೆ ಶಾಲಾ ಸಿದ್ಧಿ ತರಬೇತಿಯನ್ನು ನೀಡಲಾಯಿತು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿಯವರು ಗಿಡಕ್ಕೆ ನೀರು ಹಾಕಿ ಪ್ರಕೃತಿ ಸಂದೇಶವನ್ನು ಸಾರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶಾಲೆಯ ಸುಧಾರಣೆಗೆ ಪ್ರಸ್ತುತ ಇರುವ ವ್ಯವಸ್ಥೆಯಲ್ಲಿನ ಮೌಲ್ಯಮಾಪನಗಳ ಬಗ್ಗೆ ಶಿಕ್ಷಕರಿಗೆ ತಿಳಿಯಪಡಿಸಿದರು.
ಪಾಲಿಬೆಟ್ಟ, ಚೆನ್ನಯ್ಯನಕೋಟೆ, ತಿತಿಮತಿ, ಬಾಳೆಲೆ ಹಾಗೂ ಗೋಣಿಕೊಪ್ಪಲು ಕ್ಲಸ್ಟರಿನ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶ್ರೀಧರ್, ತಾಲೂಕಿನ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಶಾಲೆಯ ಮುಖ್ಯೋಪಾಧ್ಯಾಯ ರತೀಶ್ ರೈ, ಶಾಲಾ ಸಿದ್ಧಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಜೈಸಿಜೋಸೆಫ್, ಸಂಪನ್ಮೂಲ ವ್ಯಕ್ತಿ ಉತ್ತಪ್ಪ, ಗೋಣಿಕೊಪ್ಪಲು ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತೀಶ್ವರಿ, ವಿಶಾಲಾಕ್ಷಿ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಬಿ.ಆರ್. ಸತೀಶ್ ಉಪಸ್ಥಿತರಿದ್ದರು.