ಮಡಿಕೇರಿ, ಏ. ೧೧: ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ ೧೮ರ ಮತಗಟ್ಟೆಯನ್ನು ಎಲ್ಐಸಿ ಕಚೇರಿ ಅಥವಾ ಬಾಲಮಂದಿರದಲ್ಲಿ ಸ್ಥಾಪಿಸಬೇಕಿದೆ.
ಮಡಿಕೇರಿ ನಗರಸಭೆಗೆ ತಾ. ೨೭ ರಂದು ಚುನಾವಣೆ ನಡೆಯಲಿದೆ. ವಾರ್ಡ್ ಸಂಖ್ಯೆ ೧೮ರ ಮತದಾರರಿಗೆ ಈ ಹಿಂದೆ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆ ಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಆದರೆ ಈ ಶಾಲೆಯಲ್ಲಿ ಮೂರು ವಾರ್ಡ್ಗಳಿಗೆ ಸಂಬAಧಿಸಿದ ಮತಗಟ್ಟೆಗಳು ಇರುವುದರಿಂದ ಮತದಾರರಿಗೆ ಗೊಂದಲ ಮತ್ತು ಅನಾನುಕೂಲವಾಗುತ್ತಿದೆ. ಹೊಸ ಬಡಾವಣೆಯನ್ನೊಳಗೊಂಡ ವಾರ್ಡ್ ಸಂಖ್ಯೆ ೧೮ರ ಮತಗಟ್ಟೆಯನ್ನು ಸಮೀಪದಲ್ಲೇ ಇರುವ ಎಲ್ಐಸಿ ಕಚೇರಿ ಅಥವಾ ಬಾಲಮಂದಿರದಲ್ಲಿ ಸ್ಥಾಪಿಸಬೇಕೆಂದು ಸ್ಥಳೀಯ ಮತದಾರರು ಕೋರಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಈ ಸಂದರ್ಭ ಪ್ರಕಾಶ್ ಆಚಾರ್ಯ, ರವಿಗೌಡ, ಸುರೇಶ್ ಕುಮಾರ್, ವಸಂತಭಟ್ ಹಾಜರಿದ್ದರು.