ವೀರಾಜಪೇಟೆ, ಏ. ೧೧: ಕಳವು ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವೀರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ಅರಮೇರಿ ಗ್ರಾಮದ ದಿ. ಪೊಯ್ಯೆಟಿರ ಮೇದಪ್ಪ ಅವರ ಪುತ್ರ ನಟೇಶ್ ಪಿ.ಎಂ. ಅಲಿಯಾಸ್ ಕಾಳಪ್ಪ ಅಲಿಯಾಸ್ ದಿವ್ಯ (೪೭) ಮತ್ತು ಮೈಸೂರು ಜಿಲ್ಲೆಯ ಹುಣಸೂರು ಆಜಾದ್ ನಗರದ ನಿವಾಸಿ ಶೇಖ್ ಪಾಷಾ ಎಂಬವರ ಪುತ್ರ ಅಪ್ಸರ್ ಅಲಿಯಾಸ್ ಶಂಕರ್ (೩೬) ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಅರಮೇರಿ ಗ್ರಾಮದ ನಿವಾಸಿ ಪೊಯ್ಯೆಟಿರ ನಂದಾ ಎಂಬವರು ತಾ. ೪ ರಂದು ಸಂಜೆ ಕುಟುಂಬದೊAದಿಗೆ ಅಮ್ಮತ್ತಿ ಪುಲಿಯೇರಿ ಗ್ರಾಮದ ನೆಂಟರ ಮನೆಗೆ ತೆರಳಿದ್ದರು. ಈ ಸಂದರ್ಭ ನಟೇಶ ಮನೆಯ ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ.
ಈ ಬಗ್ಗೆ ಮನೆಯ ಮಾಲೀಕರು ತಾ. ೫ ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆÀ ದೂರು ನೀಡಿದ್ದರು. ೩ ಲಕ್ಷ ೬೭ ಸಾವಿರ ರೂ. ಮೌಲ್ಯದ ೧೦೧ ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ವೀರಾಜಪೇಟೆ ವೃತ್ತ ನಿರೀಕ್ಷಕ ಶ್ರೀಧರ್ ನೇತೃತ್ವದಲ್ಲಿ ಹುಣಸೂರು ನಗರದಲ್ಲಿ ತಾ. ೧೦ ರಂದು ಆರೋಪಿ ನಟೇಶ್ನನ್ನು ಬಂಧಿಸುತ್ತಾರೆ.
ವಿಚಾರಣೆ ವೇಳೆ ಕಳವು ಮಾಡಿದ ಚಿನ್ನಾಭರಣಗಳನ್ನು ನಟೇಶ್ ಹುಣಸೂರು ನಿವಾಸಿ ಅಫ್ಸರ್ ಎಂಬಾತನಿಗೆ ಒಪ್ಪಿಸಿ ಮಾರಾಟ ಮಾಡಲು ತಿಳಿಸಿದ್ದು, ಅಫ್ಸರ್ ಚಿನ್ನದ ಅಂಗಡಿಯೊAದರಲ್ಲಿ ಅವುಗಳನ್ನು ಗಿರಿವಿಯಿಟ್ಟು ತಂದು ನೀಡಿದ ಹಣದಲ್ಲಿ ನಟೇಶ್ ಹೊಸ ಮೊಬೈಲ್ವೊಂದನ್ನು ಖರೀದಿಸಿದ್ದ ಎಂದು ತಿಳಿದು ಬಂದಿದೆ.
ಆರೋಪಿ ನಟೇಶ್ ಕಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಮಾರ್ಚ್ ೧೯ ರಂದು ಬಿಡುಗಡೆಯಾಗಿದ್ದ ಎನ್ನಲಾಗಿದೆ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳು ಚಾಲ್ತಿಯಲ್ಲಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ ಪೊಲೀಸರು ಒಟ್ಟು ೩ ಲಕ್ಷದ ೬೭ ಸಾವಿರ ಮೌಲ್ಯದ ಒಟ್ಟು ೧೦೧ ಗ್ರಾಂ ತೂಕವನ್ನು ಒಳಗೊಂಡಿರುವ ಎರಡು ಜೊತೆ ಓಲೆ, ೫೮ ಗ್ರಾಂ ತೂಕದ ಕೊಕ್ಕೆತಾತಿ, ಮತ್ತು ಒಂದು ಜೊತೆ ಬಳೆ ಹಾಗೂ ೨೯,೨೫೦ ರೂ. ನಗದು ಸೇರಿದಂತೆ ೮೦೦೦ ರೂ. ಮೌಲ್ಯದ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ನಿರ್ದೇಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಸಿದ್ದಲಿಂಗ ಭೀ ಬಾನಸೆ, ನಗರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಹೆಚ್.ಎಸ್. ಭೋಜಪ್ಪ, ಗ್ರಾಮಾಂತರ ಠಾಣೆಯ ಎ.ಎಸ್.ಐ ಶ್ರೀಧರ್, ಸಿಬ್ಬಂದಿಗಳಾದ ತೀರ್ಥ ಕುಮಾರ್, ರಾಮಪ್ಪ, ನೆಹರು ಕುಮಾರ್, ರವಿ, ಮುಸ್ತಾಫಾ, ಎಂ. ಚಂದ್ರಶೇಖರ್, ಪ್ರದೀಪ್, ಈರಪ್ಪ, ಸಿ,ಡಿ.ಆರ್. ವಿಭಾಗದ ರಾಜೇಶ್ ಮತ್ತು ಗಿರೀಶ್ ಹಾಗೂ ಚಾಲಕರಾದ ಮಹೇಶ್ ಮತ್ತು ಸಂದೀಪ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ಕೆ.ಕೆ.ಎಸ್.