ಮಡಿಕೇರಿ, ಏ. ೧೧: ಕಗ್ಗೋಡ್ಲು ಶ್ರೀ ವೃಷಾಭರೂಢ ಭಗವತಿ ಕ್ಷೇತ್ರದಲ್ಲಿ ತಾ. ೧೩ ರಿಂದ (ನಾಳೆ) ತಾ.೧೯ ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ತಾ. ೧೩ ರಂದು ಬೆಳಗ್ಗೆ ೯.೩೦ಕ್ಕೆ ನಿತ್ಯ ಪೂಜೆ, ೧೦.೩೦ಕ್ಕೆ ಪಂಚಗವ್ಯ, ಪುಣ್ಯಾಹ ವಾಚನ, ಋತ್ವಿಗ್ವರಣ, ಮಹಾಗಣಪತಿ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಭಗವತಿ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬ ಗಂಟೆಯಿAದ ಸಾಮೂಹಿಕ ಪ್ರಾರ್ಥನೆ, ಉತ್ಸವಾರಂಭ, ಧ್ವಜಾರೋಹಣ, ಪರಿವಾರ ದೇವತಾ ಬಲಿ, ದೇವಿ ದರ್ಶನ, ಮಹಾಪೂಜೆ ನಡೆಯಲಿದೆ. ತಾ. ೧೪ ರಿಂದ ವಿವಿಧ ಧಾರ್ಮಿಕ ಕಾರ್ಯ ಹಾಗೂ ತಾ.೧೯ ರಂದು ಬೇಟೆ ಅಯ್ಯಪ್ಪ ತೆರೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ. ಈ ಬಾರಿ ಸರಳವಾಗಿ ಉತ್ಸವ ನೆರವೇರಲಿದೆ.