ಕುಶಾಲನಗರ, ಏ. ೧೦: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಎಂ.ಡಿ. ರಮೇಶ್ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ರಮೇಶ್ ೯ ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎ. ಮೊಣ್ಣಪ್ಪ ಆರು ಮತ ಪಡೆದಿದ್ದಾರೆ. ಸಮಿತಿಯಲ್ಲಿ ಒಟ್ಟು ೧೫ ಸದಸ್ಯರಿದ್ದು, ಬಿ.ಜೆ.ಪಿ.ಯ ೮, ಜೆಡಿಎಸ್‌ನ ೫ ಮತ್ತು ಕಾಂಗ್ರೆಸ್‌ನ ಇಬ್ಬರು ಸದಸ್ಯರಿಂದ ಗುಪ್ತ ಮತದಾನದ ಮೂಲಕ ಆಯ್ಕೆ ನಡೆದಿದೆ.
ಚುನಾವಣಾಧಿಕಾರಿಯಾಗಿ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಕಾರ್ಯ ನಿರ್ವಹಿಸಿದರು.
ಫಲಿತಾಂಶದ ನಂತರ ಸದಸ್ಯರಾದ ಭೀಮಯ್ಯ, ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ನೂತನ ಅಧ್ಯಕ್ಷ ರಮೇಶ್ ಅವರನ್ನು ಅಭಿನಂದಿಸಿದರು. ರಮೇಶ್ ಈ ಹಿಂದೆ ಸಮಿತಿಯ ಅಧ್ಯಕ್ಷÀರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.