ಗೋಣಿಕೊಪ್ಪಲು, ಏ. ೧೦: ಹಲವು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಭೀಮನ ಕಲ್ಲು ಪೈಸಾರಿ ನಿವಾಸಿಗಳ ಸಮಸ್ಯೆಗೆ ಇದೀಗ ಪರಿಹಾರ ಲಭಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರೂ. ೫೧ ಲಕ್ಷ ಅನುದಾನದಲ್ಲಿ ನಿರ್ಮಾಣ ವಾಗುತ್ತಿರುವ ಓವರ್‌ಹೆಡ್ ಟ್ಯಾಂಕ್‌ನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಕುಡಿಯುವ ನೀರಿಗಾಗಿ ಪ್ರಧಾನಮಂತ್ರಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ನೀರನ್ನು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದ್ದು, ಭೂಮಿಪೂಜೆ ನಡೆಸಲಾಯಿತು. ನೂರಾರು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರ ಕಾಣಲಿದೆ. ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ಕುಡಿಯುವ ನೀರಿನ ದಾಹ ನೀಗಿಸಲು ಕೇಂದ್ರ ಸರ್ಕಾರ ಹೆಚ್ಚಿನ ಅನುದಾನವನ್ನು ಈ ಗ್ರಾಮಕ್ಕೆ ವಿನಿಯೋಗಿಸಿದೆ. ಇದರ ಸದುಪಯೋಗ ಪಡೆಯುವ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.

ಪಂಚಾಯಿತಿಯ ಉಪಾಧ್ಯಕ್ಷ ಕೊಲ್ಲಿರ ಧನು ಪೂಣಚ್ಚ ಮಾತನಾಡಿ, ಈ ಭಾಗದ ಜನತೆಯ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿ ರುವುದನ್ನು ಅರಿತು ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರು ನೀಡಲು ಬೃಹತ್ ಯೋಜನೆಯನ್ನು ಜಲ್ ಜೀವನ್ ಮಿಷನ್ ಮೂಲಕ ತರಲಾಗಿದೆ. ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ನಡೆಸಬೇಕು. ನಿಗದಿತ ಸಮಯದಲ್ಲಿ ಕುಡಿಯುವ ನೀರು ಜನತೆಗೆ ಸಿಗುವಂತಾಗಲು ಕೆಲಸ ನಿರ್ವಹಿಸುವಂತೆ ತಿಳಿಸಿದರು.

ಹೊಸೂರು ಗ್ರಾಮ ಈ ಭಾಗದ ಜನತೆಯ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿ ರುವುದನ್ನು ಅರಿತು ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರು ನೀಡಲು ಬೃಹತ್ ಯೋಜನೆಯನ್ನು ಜಲ್ ಜೀವನ್ ಮಿಷನ್ ಮೂಲಕ ತರಲಾಗಿದೆ. ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ನಡೆಸಬೇಕು. ನಿಗದಿತ ಸಮಯದಲ್ಲಿ ಕುಡಿಯುವ ನೀರು ಜನತೆಗೆ ಸಿಗುವಂತಾಗಲು ಕೆಲಸ ನಿರ್ವಹಿಸುವಂತೆ ತಿಳಿಸಿದರು.

ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂದ್ಯAಡ ಶಾಂತಿ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಕುಟ್ಟಂಡ ಅಜಿತ್ ಕರುಂಬಯ್ಯ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಮಹಾದೇವ್, ಪ್ರಕಾಶ್, ಸುಶೀಲ, ಸಣ್ಣುವಂಡ ರತ್ನ ಸುಬ್ಬಯ್ಯ, ಸುಮ, ಮಹೇಶ್, ವಿಶಾಲಾಕ್ಷಿ, ಮುರುವಂಡ ಸುರೇಶ್, ಮಧು ಸೇರಿದಂತೆ ಗ್ರಾಮಸ್ಥರಾದ ಚೆಂಡಿರ ಬೋಪಣ್ಣ, ಜಯಪ್ರಕಾಶ್, ಶರಣ್, ಮೋಹನ್, ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ಪಂಚಾಯಿತಿ ಪಿಡಿಒ ಶ್ರೀನಿವಾಸ್ ಸ್ವಾಗತಿಸಿ, ವಂದಿಸಿದರು.