ಮಡಿಕೇರಿ, ಏ. ೧೦; ವೈಲ್ಡ್ ಮಾಸ್ರ‍್ಸ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಜಯಶಾಲಿಯಾಗುವ ತಂಡಕ್ಕೆ ನೀಡುವ ಟ್ರೋಫಿಗಳನ್ನು ಎಂ.ವೈ.ಸಿ.ಸಿ. ಕ್ರಿಕೆಟ್ ಕ್ಲಬ್ ಅಧ್ಯಕ್ಷ ಉತ್ತಪ್ಪ ಅನಾವರಣ ಮಾಡಿದರು.

ಈ ಸಂದರ್ಭ ವೈಲ್ಡ್ ಮಾಸ್ರ‍್ಸ್ನ ಅಧ್ಯಕ್ಷ ರವಿಕಿರಣ್, ಉಪಾಧ್ಯಕ್ಷ ಪ್ರಿನ್ಸ್ ಕುಶಾಲಪ್ಪ, ಕಾರ್ಯದರ್ಶಿ ಪ್ರಶಾಂತ್, ಚಿಂತನ ಗಂಗ ಟುಟೋರಿಯಲ್‌ನ ಕಣ್ಣನ್ ಸೇರಿದಂತೆ ಇನ್ನಿತರರು ಇದ್ದರು